News Kannada
Saturday, October 01 2022

ಕರ್ನಾಟಕ

ಡಿ.15 ರಿಂದ ರಸ್ತೆಗಳ ದುರಸ್ತಿ ಕಾರ್ಯ ಆರಂಭ: ಮಡಿಕೇರಿ ರಕ್ಷಣಾ ವೇದಿಕೆಗೆ ಜಿಲ್ಲಾಧಿಕಾರಿ ಭರವಸೆ - 1 min read

Photo Credit :

ಡಿ.15 ರಿಂದ ರಸ್ತೆಗಳ ದುರಸ್ತಿ ಕಾರ್ಯ ಆರಂಭ: ಮಡಿಕೇರಿ ರಕ್ಷಣಾ ವೇದಿಕೆಗೆ ಜಿಲ್ಲಾಧಿಕಾರಿ ಭರವಸೆ

ಮಡಿಕೇರಿ: ತೀರಾ ಹದಗೆಟ್ಟಿರುವ ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿಗೆ ಡಿ.15ರ ನಂತರ ಚಾಲನೆ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.

ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಬಳಿಗೆ ನಿಯೋಗ ತೆರಳಿದ ವೇದಿಕೆಯ ಪ್ರಮುಖರು ರಸ್ತೆ ಅವ್ಯವಸ್ಥೆ, ಸ್ಟೋನ್‍ಹಿಲ್ ಬಳಿಯ ಕಸದ ರಾಶಿಯ ಸಮಸ್ಯೆ, ಬೀದಿನಾಯಿಗಳು ಮತ್ತು ಬೀಡಾಡಿ ಜಾನುವಾರುಗಳ ಹಾವಳಿ ಬಗ್ಗೆ ಗಮನ ಸೆಳೆಯಲಾಯಿತು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಡಿ.15ರಿಂದ ಆರಂಭಗೊಳ್ಳುವ ರಸ್ತೆ ಕಾಮಗಾರಿ ಮೇ 31ರೊಳಗೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿರುವುದಾಗಿ ತಿಳಿಸಿದರು.

ಕಳೆದ 20 ವರ್ಷಗಳಿಂದ ಸ್ಟೋನ್ ಹಿಲ್ ಬಳಿಯ ಕಸದ ಸಮಸ್ಯೆ ಹಾಗೇ ಉಳಿದುಕೊಂಡಿದೆ. ಇದಕ್ಕೆ ತಕ್ಷಣ ಪರಿಹಾರ ಸೂಚಿಸುವುದು ಕಷ್ಟ ಸಾಧ್ಯ, ಅಲ್ಲದೆ ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಪ್ರಕ್ರಿಯೆ ನಡೆಸಬೇಕಾಗಿದ್ದು, ಸಂಘ ಸಂಸ್ಥೆಗಳ ಸಹಕಾರದ ಅಗತ್ಯವಿದೆ. ಬೀಡಾಡಿ ಜಾನುವಾರುಗಳನ್ನು ಪೊಲೀಸರ ಸಹಕಾರದಿಂದ ಸ್ಥಳಾಂತರಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಮತ್ತು ಮಡಿಕೇರಿ ರಕ್ಷಣಾ ವೇದಿಕೆಯ ಸಹಕಾರ ಕೋರಿದ್ದಾರೆ ಎಂದು ಪವನ್ ಪೆಮ್ಮಯ್ಯ ಹೇಳಿದರು.

ಇದು ವೇದಿಕೆಯ ಹೋರಾಟಕ್ಕೆ ಸಿಕ್ಕಿದ ಪ್ರತಿಫಲವೆಂದು ಅವರು ಹರ್ಷ ವ್ಯಕ್ತಪಡಿಸಿದರು.

ಬ್ರಿಜೇಶ್ ಕಾಳಪ್ಪ ಅವರ ನೇತೃತ್ವದ ನಿಯೋಗದಲ್ಲಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ಬಿ.ಎಂ.ಹರೀಶ್, ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ್, ಖಜಾಂಚಿ ಉಮೇಶ್ ಕುಮಾರ್, ನಿರ್ದೇಶಕ ದಿನೇಶ್ ನಾಯರ್,  ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ ಮತ್ತಿತರ ಪ್ರಮುಖರು ಹಾಜರಿದ್ದರು.

See also  ಬಂದ್ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು