ಮಂಡ್ಯ: ಸಂಬಂಧಿಕರ ಮದುವೆಗೆಂದು ಬಂದ ಯುವಕನೋರ್ವ ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋಗಿ ಜಾರಿಬಿದ್ದು ಕೊಚ್ಚಿಹೋಗಿರುವ ಘಟನೆ ತಾಲೂಕಿನ ತುಂಬಕೆರೆ ಗ್ರಾಮದ ಬಳಿಯಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ನಡೆದಿದೆ.
ಬೆಂಗಳೂರಿನ ವೇಣು (26) ಎಂಬಾತನೇ ನಾಲೆಯಲ್ಲಿ ಕೊಚ್ಚಿಹೋಗಿರುವ ಯುವಕ. ಈತ ಬೆಂಗಳೂರಿನಿಂದ ಗ್ರಾಮದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಗೆಂದು ಬಂದಿದ್ದ. ಗ್ರಾಮದ ಹೊರ ವಲಯದಲ್ಲಿರುವ ವಿಶ್ವೇಶ್ವರಯ್ಯ ನಾಲೆ ಬಳಿ ವೇಣು ಸೇರಿದಂತೆ ಇತರೆ ಸ್ನೇಹಿತರು ಹೋಗಿದ್ದರು. ಈ ವೇಳೆ ವೇಣು ಕೈ-ಕಾಲು ತೊಳೆಯಲೆಂದು ನಾಲೆಗೆ ಇಳಿದಿದ್ದ. ಆಕಸ್ಮಿಕವಾಗಿ ನಾಲೆಗೆ ಬಿದ್ದು ನೀರಿನ ಸಳೆತಕ್ಕೆ ಕೊಚ್ಚಿಹೋಗಿದ್ದಾನೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಪರಿಶೀಲನೆ ನಡೆಸಿದರು. ನುರಿತ ಈಜುಗಾರರ ಸಹಾಯದಿಂದ ವೇಣು ಶವಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.