ಕಾಸರಗೋಡು : ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕರೋರ್ವರು ಡಿಪೋ ದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ನೀಲೇಶ್ವರ ಪಳ್ಳಿಕೆರೆಯ ಪಿ . ವಿ ಸುಕುಮಾರನ್ ( ೪೮) ಅಆತ್ಮಹತ್ಯೆ ಮಾಡಿಕೊಂಡವರು.
ಗುರುವಾರ ರಾತ್ರಿ ಕಾಸರಗೋಡು ಕೆ ಎಸ್ ಆರ್ ಟಿ ಸಿ ಡಿಪೋ ದ ಒಂದನೇ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಇದನ್ನು ಗಮನಿಸಿದ ಉಳಿದ ಸಿಬಂದಿಗಳು ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಯೆಸಲಾಗಲಿಲ್ಲ .
ವೇತನ ಮೊಟಕು ಗೊಂಡಿರುವುದೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಇವರ ತಂದೆ ಕೆಲ ದಿನಗಳ ಹಿಂದೆ ನಿಧನರಾಗಿದ್ದು , ೨೦ ದಿನಗಳ ರಜೆಯಲ್ಲಿ ತೆರಳಿ ಗುರುವಾರ ರಾತ್ರಿಯಷ್ಟೇ ಮತ್ತೆ ಕೆಲಸಕ್ಕೆ ಹಾಜರಾಗಿ ದ್ದರು.
ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ