ಉತ್ತರ ಪ್ರದೇಶ: ಮದುವೆ ಸಮಾರಂಭದಲ್ಲಿ ನೃತ್ಯ ನಿಲ್ಲಿಸಿದ್ದಕ್ಕೆ ಯುವತಿಯ ಮೇಲೆ ಗುಂಡು ಹಾರಿಸಿರುವ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡಿತ ಹೊಡೆತಕ್ಕೆ ಯುವತಿ ಹೀನಾಳ ದವಡೆ ಭಾಗ ಛಿದ್ರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳಂದ ತಿಳಿದು ಬಂದಿದೆ.
ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ್ದಕ್ಕೆ ಆಕೆಯ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಚಿತ್ರಾಕೋಟ್ ನಲ್ಲಿ ನಡೆದಿತ್ತು.