ಶಿವಮೊಗ್ಗ: ನಾಳೆ ಹೊರಬೀಳುವ ಉಪಚುನಾವಣೆಯ ಫಲಿತಾಂಶದಲ್ಲಿ ಅಬ್ಬಬ್ಬ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತಲಾ ಒಂದೊಂದು ಕ್ಷೇತ್ರ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ಸಾಗರದ ಮೇಲಿನ ಮನೆಯಲ್ಲಿ ನಡೆಯುತ್ತಿರುವ ಸಭಾಪತಿ ವಿಶ್ವೇಶ್ವರಯ್ಯ ಕಾಗೇರಿ ಅವರ ಮಗಳ ಮದುವೆಗೆ ಆಗಮಿಸುತ್ತಿದ್ದು, ಮಂಕಳಲೆಯ ಹೆಲಿಪ್ಯಾಡ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಾಳೆ ಹೊರಬೀಳಲಿರುವ ಫಲಿತಾಂತದಿಂದ ಮುಂದಿನ ಮೂರು ವರೆ ವರ್ಷ ರಾಜ್ಯದಲ್ಲಿ ಸುಭದ್ರ ಹಾಗೂ ಬಡವರ ಪರ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದರು.
ನಾಳೆ ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದಲ್ಲಿಬಿಜೆಪಿ 15 ರಲ್ಲಿ 13 ಕ್ಷೇತ್ರ ಗೆಲ್ಲಲಿದೆ. ಅಬ್ಬಬ್ಬ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಕ್ಷೇತ್ರ ಗೆಲ್ಲಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ಮೂರುವರೆ ವರ್ಷ ಬಡವರ, ಧೀನದಲಿತರಪರ ಸರ್ಕಾರ ನಡೆಯಲಿದ್ದು, ಬಿಜೆಪಿಯೊಂದಿಗೂ ವಿರೋಧ ಪಕ್ಷಗಳು ಕೈಜೋಡಿಸುವಂತೆ ವಿನಂತಿಸಿದರು.