News Kannada
Tuesday, November 29 2022

ಕರ್ನಾಟಕ

ಪ್ರತಿಷ್ಠಿತ ಹುತ್ತರಿ ಕಪ್ ಫುಟ್ಬಾಲ್ : ಮೈಸೂರಿನ ವಿಜಯನಗರ ಎಫ್‍ಸಿ ತಂಡ ಚಾಂಪಿಯನ್ - 1 min read

Photo Credit :

ಪ್ರತಿಷ್ಠಿತ ಹುತ್ತರಿ ಕಪ್ ಫುಟ್ಬಾಲ್ : ಮೈಸೂರಿನ ವಿಜಯನಗರ ಎಫ್‍ಸಿ ತಂಡ ಚಾಂಪಿಯನ್

ಮಡಿಕೇರಿ: ಮರಗೋಡಿನಲ್ಲಿ ನಡೆದ ಪ್ರತಿಷ್ಠಿತ ಹುತ್ತರಿ ಕಪ್ ಫುಟ್ಬಾಲ್-2019ರ ನೂತನ ಚಾಂಪಿಯನ್ ಆಗಿ ಮೈಸೂರಿನ ವಿಜಯನಗರ ಎಫ್‍ಸಿ ತಂಡ ಹೊರಹೊಮ್ಮಿದ್ದು, ರನ್ನರ್ಸ್ ಅಪ್ ಪ್ರಶಸ್ತಿಗೆ ಪಾಲಿಬೆಟ್ಟದ ನೆಹರು ಎಫ್‍ಸಿ ತಂಡ ಭಾಜನವಾಗಿದೆ.

 ಮರಗೋಡು ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ವಿಜಯನಗರ ತಂಡ ಹಾಲಿ ಚಾಂಪಿಯನ್ ಪಾಲಿಬೆಟ್ಟದ ನೆಹರೂ ಎಫ್‍ಸಿ ತಂಡವನ್ನು ಏಕೈಕ ಗೋಲಿನ ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 

ವಿಜಯ ನಗರ ತಂಡದ ಮುನ್ಪಡೆ ಆಟಗಾರ ಕಾರ್ಯಪ್ಪ ಅವರು ಎದುರಾಳಿ ನೆಹರು ತಂಡದ ರಕ್ಷಣೆಯನ್ನು ಭೇದಿಸಿ ಮೊದಲಾರ್ಧದಲ್ಲಿ ಗಳಿಸಿದ ಗೋಲು ತಂಡದ ಗೆಲುವಿಗೆ ಕಾರಣವಾಯಿತು.ದ್ವಿತೀಯಾರ್ಧದಲ್ಲಿ   ನೆಹರೂ ಎಫ್‍ಸಿ ತಂಡ ಸಮಬಲದ ಗೋಲು ಗಳಿಕೆಗೆ ನಡೆಸಿದ ಪ್ರಯತ್ನಗಳು ಪಂದ್ಯದ ರೋಚಕತೆಯನ್ನು ಹೆಚ್ಚಿಸಿತಾದರು, ಗೋಲು ಗಳಿಸಲು ಸಾಧ್ಯವಾಗದೆ ಪರಾಭವಗೊಂಡಿತು.

 ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ವಿಜಯನಗರ ಎಫ್‍ಸಿ ತಂಡವು ಪಾಲಿಬೆಟ್ಟದ ಮಿಲನ್ಸ್ ಅಮ್ಮತ್ತಿ ತಂಡವನ್ನು ಮಣಿಸಿ ಫೈನಲ್ ಲಗ್ಗೆ ಇಟ್ಟರೆ, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನೆಹರು ಎಫ್‍ಸಿ ತಂಡವು 6-0 ಗೋಲುಗಳ ಭಾರೀ ಅಂತರದಿಂದ ಆತಿಥೇಯ ವೈಷ್ಣವಿ ಎಫ್‍ಸಿ ತಂಡದ ವಿರುದ್ಧ ಗೆಲುವು ದಾಖಲಿಸಿತ್ತು.

ಬಹುಮಾನ ವಿತರಣೆ- ಪಂದ್ಯಾವಳಿಯ ಛಾಂಪಿಯನ್ ವಿಜಯನಗರ ತಂಡ ಆಕರ್ಷಕ ಟ್ರೋಫಿಯೊಂದಿಗೆ 30ಸಾವಿರ ರೂ. ನಗದು ಬಹುಮಾನ ಪಡೆದರೆ, ರನ್ನರ್ಸ್ ನೆಹರು ಎಫ್‍ಸಿ ತಂಡ  ಟ್ರೋಫಿಯೊಂದಿಗೆ 20ಸಾವಿರ ರೂ. ನಗದು ಬಹುಮಾನ ಪಡೆದುಕೊಂಡಿತು. ಸೆಮಿಫೈನಲ್ ಪ್ರವೇಶಿಸಿದ ವೈಷ್ಣವಿ ಎಫ್‍ಸಿ ಹಾಗೂ ಅಮ್ಮತ್ತಿ ಮಿಲನ್ಸ್ ತಂಡಕ್ಕೆ ತಲಾ 5 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಯಿತು.

ನೆಹರು ಎಫ್‍ಸಿ ತಂಡದ ಅರುಣ್ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾದರೆ, ವಿಜಯ ನಗರ ತಂಡದ ಯಶ್ವಂತ್ ಬೆಸ್ಟ್ ಗೋಲಿ ಪ್ರಶಸ್ತಿಗೆ ಭಾಜನರಾದರು. ವೈಷ್ಣವಿ ತಂಡದ ಐಮಂಡ ಚೇತನ್ ಅತ್ಯುತ್ತಮ ರಕ್ಷಣಾ ಆಟಗಾರ ಆಗಿ ಆಯ್ಕೆಯಾದರೆ, ಒಟ್ಟು 8 ಗೋಲು ಬಾರಿಸಿದ ವಿಜಯನಗರ ತಂಡದ ಕಾರ್ಯಪ್ಪ ಅತ್ಯಧಿಕ ಸ್ಕೋರರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಪಂದ್ಯಾವಳಿಯ ಅತ್ಯುತ್ತಮ ತಂಡವಾಗಿ ರಾಯಲ್ಸ್ ಕುಕನೂರು ತಂಡ ಆಯ್ಕೆಯಾಯಿತು.

ಸನ್ಮಾನ-ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಕೊಂಪುಳಿರ ಪೊನ್ನಮ್ಮ ಉತ್ತಪ್ಪ, ಸುಜಯ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸೇವೆ ಮಾಡಿರುವ ಐಮಂಡ ಗೋಪಾಲ್ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು.

See also  ಬೆಳಗಾವಿಯಲ್ಲಿ ಬಯಲಿಗೆ ಶೌಚಕ್ಕೆ ಹೋಗುತ್ತಿರುವ ಪೊಲೀಸರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು