News Kannada
Friday, December 02 2022

ಕರ್ನಾಟಕ

ಸಾಹಿತ್ಯ ಸಾಮಾಜಿಕ ಅನಿಷ್ಟ ತೊಡೆಯುವ ಅಸ್ತ್ರವಾಗಲಿ: ಸಿಪಿಕೆ

Photo Credit :

ಸಾಹಿತ್ಯ ಸಾಮಾಜಿಕ ಅನಿಷ್ಟ ತೊಡೆಯುವ ಅಸ್ತ್ರವಾಗಲಿ: ಸಿಪಿಕೆ

ಪಿರಿಯಾಪಟ್ಟಣ: ಸಾಹಿತ್ಯ ಸಮಾಜದಲ್ಲಿನ ಅನಿಷ್ಟಗಳನ್ನು ತೊಡೆದು ಹಾಕುವ ಸಾಮಾಜಿಕ ಅಸ್ತ್ರಗಳಾಗಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ತಿಳಿಸಿದರು.

ತಾಲೂಕಿನ ಬೆಟ್ಟದಪುರದಲ್ಲಿ 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯೂ ಅನೇಕ ಅನಿಷ್ಟ ವಿಚಾರಗಳ ಮೂಲಕ ಕಲುಷಿತಗೊಂಡಿದ್ದು ಉತ್ತಮ ಸಾಹಿತ್ಯಗಳ ಮೂಲಕ ಶುದ್ಧೀಕರಣ ಮಾಡಬೇಕಾಗಿದೆ. ಆದ್ದರಿಂದ ಸಾಹಿತ್ಯ ಸಮ್ಮೇಳನಗಳ ಅವಶ್ಯಕತೆಯಿದೆ. ಈ ಮೂಲಕ ಸಮಾಜದಲ್ಲಿನ ಜಾತೀಯತೆ, ಮೌಢ್ಯತೆ, ಅಸಮಾನತೆಯಂತಹ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಸಾಧ್ಯ. ಈ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ಕನ್ನಡಿಗನು ಕೂಡ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ಪುಸ್ತಕಗಳ ನಿರಂತರ ಅಧ್ಯಯನವು ಮಾನವನ ಮಾನಸಿಕ ಬೌದ್ಧಿಕತೆಯನ್ನು ಹೆಚ್ಚಿಸುವಂತದಾಗಿದ್ದು. ಈ ಕಾರಣಕ್ಕಾಗಿ ರಾಷ್ಟ್ರಕವಿ ಕುವೆಂಪು, ದೇಜೆಗೌ ಸೇರಿದಂತೆ ಇತರರು ತಮ್ಮ ಸಾಹಿತ್ಯದ ಮೂಲಕ ಕನ್ನಡದ ಜಾಗೃತಿಯ ಕೆಲಸವನ್ನು ಮಾಡಿದ್ದಾರೆ. ಕುವೆಂಪು ಅವರು ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದರು. ಆದರೆ ಪ್ರಸ್ತುತ ಯಾರು ಕೂಡ ಈ ಸಂದೇಶವನ್ನು ಸಾರ್ಥಕಗೊಳಿಸುತ್ತಿಲ್ಲವೆಂಬುದು ವಿಷಾದದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಟಿ.ಸಿ. ವಸಂತರಾಜೇ ಅರಸ್ ಮಾತನಾಡಿ ಕರ್ನಾಟಕದಲ್ಲಿ ಶಿಕ್ಷಣ ಇಲಾಖೆ ನೀಡುತ್ತಿರುವ ಶಿಕ್ಷಣ ಕ್ರಮದಲ್ಲಿ ಯೋಗ್ಯ ಬದಲಾವಣೆ ಆಗಬೇಕಿದೆ. ಸುಪ್ರಿಂ  ಕೋರ್ಟ್ ಆದೇಶ ನೀಡಿದೆ ಎಂಬ ಕಾರಣಕ್ಕೆ ಖಾಸಗಿ ಶಾಲೆಗಳಿಗೆ 3ವರ್ಷಗಳ ಹಿಂದಿನಿಂದ ಆಂಗ್ಲ ಮಾಧ್ಯಮವನ್ನು ಪ್ರಾಥಮಿಕ ಹಂತದಿಂದಲೂ ಅನುಮತಿ ನೀಡುತ್ತಿದೆ. ಈ ವರ್ಷದಲ್ಲೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಜರಾತಿ ಅತಿ ವಿರಳವಾಗಿರುವುದನ್ನು ತಡೆಯಲು ಆಂóಗ್ಲ ಮಾಧ್ಯಮವನ್ನು 1ನೇ ತರಗತಿಯಿಂದಲೇ ಪ್ರಾರಂಭಿಸಿದೆ ಇದರಿಂದ ಕನ್ನಡ ಭಾಷೆಗೆ ದ್ರೋಹ ಬಗೆದಂತೆ ಆಗುತ್ತದೆ. ಆದ್ದರಿಂದ ಸರ್ಕರಿ ಮತ್ತು ಖಾಸಗಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ 10ತರಗತಿವರೆಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಬಳಸಬೇಕು ಎಂದರು.

ಬೆಟ್ಟದಪುರವನ್ನು ಅಭಿವೃದ್ಧಿ ಪಡಿಸಲು ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಅನಿವಾರ್ಯವಿದ್ದು ಶಾಸಕ ಕೆ. ಮಹದೇವ್ ಗಮನ ಹರಿಸಬೇಕು. ಇತಿಹಾಸ ಪ್ರಸಿದ್ದ ಶಿಡ್ಲುಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಮೇಲೆ ಭಕ್ತಾದಿಗಳಿಗೆ ಕುಡಿಯಲು ನೀರಿನ ಸೌಲಭ್ಯ, ಬೆಟ್ಟಹತ್ತಲು ರೋಪ್ ವೇ ಮತ್ತು ದೀಪಾವಳಿ ಹಬ್ಬದಂದು ನಡೆಯುವ ದೀವಟಿಗೆ ಸೇವೆಯ ರಸ್ತೆಗಳು ದುರಸ್ತಿಯಾಗ ಬೇಕು ಜೊತೆಗೆ ಬೆಟ್ಟದಪುರದ ಗ್ರಾಮಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು, ಬೆಟ್ಟದಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟ್ಟೆಗೆ ಡಿ.ದೇವರಾಜೇಅರಸ್‍ರವರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

See also  ಸಮುದ್ರದಾಳದ ವಿಷ್ಮಯ ಲೋಕವನ್ನು ತೆರೆದಿಡಲು ಭಟ್ಕಳದಲ್ಲಿ ಸ್ಕೂಬಾ ಡೈವಿಂಗ್ ಉತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು