News Kannada
Wednesday, December 07 2022

ಕರ್ನಾಟಕ

ಕಣ್ಣೂರಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾರಿಗೆ ಮುತ್ತಿಗೆ

Photo Credit :

ಕಣ್ಣೂರಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾರಿಗೆ ಮುತ್ತಿಗೆ

ಕಾಸರಗೋಡು: ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ವೇಳೆ ನಡೆದ ಗಲಭೆ ಹಾಗೂ ಗೋಲಿಬಾರ್ ಪ್ರಕರಣದ ಬೆನ್ನಲ್ಲೇ ಕರ್ನಾಟಕ ಮುಖ್ಯಮತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ಕೇರಳದಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಿದೆ.

ಕೇರಳ ಪ್ರವಾಸದಲ್ಲಿರುವ ಯಡಿಯೂರಪ್ಪರಿಗೆ ಅಲ್ಲಲ್ಲಿ ಪ್ರತಿಭಟನೆ ಎದುರಿಸಬೇಕಾಗಿ ಬಂದಿದ್ದು , ನಿನ್ನೆ ತಿರುವನಂತಪುರದಲ್ಲಿ ಯುವ ಕಾಂಗ್ರೆಸ್ , ಕೆ ಎಸ್ ಯು ಕಾರ್ಯಕರ್ತರು ಕಪ್ಪು ದ್ವಜ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರು . ಇಂದು ಮಧ್ಯಾಹ್ನ ಕಣ್ಣೂರಿಗೆ ಆಗಮಿಸಿದ್ದ ಯಡಿಯೂರಪ್ಪರವರಿಗೆ ಡಿವೈಎಫ್ ಐ ಸಂಘಟನೆ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಮುಖ್ಯಮಂತ್ರಿ ಪ್ರಯಾಣ ಮಾಡುತ್ತಿದ್ದ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರು . ಪೊಲೀಸರನ್ನು ಬೇಧಿಸಿ ಡಿ ವೈ ಎಫ್ ಐ ಕಾರ್ಯಕರ್ತರು ಕಾರಿನ ಮುಂದೆ ಸಾಗಿ ಅಡ್ಡಗಟ್ಟಲೆತ್ನಿಸಿದ್ದು ,ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು . ತಿರುವನಂತಪುರದಿಂದ ವಿಮಾನ ಮೂಲಕ ಕಣ್ಣೂರಿಗೆ ಆಗಮಿಸಿ ಅಲ್ಲಿಂದ ತಳಿಪರಂಬ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಲು ಯಡಿಯೂರಪ್ಪ ಆಗಮಿಸಿದ್ದರು .

ಸೋಮವಾರ ರಾತ್ರಿ ತಿರುವನಂತಪುರದಲ್ಲಿರುವ ಅನಂತಪ ದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ತೆರಳಿದ್ದ ಸಿಎಂ ಬಿಎಸ್‌ವೈ ವಿರುದ್ಧ ಕೇರಳ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರುಸಂದರ್ಭದಲ್ಲೂ ಪ್ರತಿಭಟನೆ ಎದುರಿಸಬೇಕಾಗಿ ಬಂದಿತ್ತು . ಬಳಿಕ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದರು.

ಮಂಗಳೂರಿನಲ್ಲಿ ನಡೆದ ಗಲಭೆ , ಗೋಲಿಬಾರ್ ಹಾಗೂ ಕೇರಳದ ಮಾಧ್ಯಮ ಪ್ರತಿನಿಧಿಗಳನ್ನು ಕಸ್ಟಡಿಗೆ ಪಡೆದ ಘಟನೆ ಜೊತೆಗೆ ಮಂಗಳೂರು ಗಲಭೆಗೆ ಕೇರಳೀಯರ ಕುಮ್ಮಕ್ಕು ಇದೆ ಎಂಬ ಆರೋಪವು ಇದೀಗ ಕೇರಳದಲ್ಲೂ ಪ್ರತಿದ್ವನಿಸ ತೊಡಗಿದೆ

See also  ಕಾರವಾರದ ಕಿಮ್ಸ್ ನಲ್ಲಿ ಕೊರೊನಾಗೆ ಶಿರಸಿ ವ್ಯಕ್ತಿ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು