News Kannada
Wednesday, December 07 2022

ಕರ್ನಾಟಕ

ಪಯಸ್ವಿನಿ ಹೊಳೆ ಬದಿ ಆನೆ ಮರಿ ಸಾವು

Photo Credit :

ಪಯಸ್ವಿನಿ ಹೊಳೆ ಬದಿ ಆನೆ ಮರಿ ಸಾವು

ಕಾಸರಗೋಡು: ದೇಲಂಪಾಡಿ ಕಾಡಮನೆ ಪಯಸ್ವಿನಿ ಹೊಳೆಯ ಬದಿ ಆನೆ ಮರಿಯೊಂದು ಮೃತಪಟ್ಟ ಸ್ಥಿತಿಯಲ್ಲಿ ಇಂದು ಸಂಜೆ ಪತ್ತೆಯಾಗಿದೆ . ಅರಣ್ಯ ಇಲಾಖಾಧಿಕಾರಿಗಳು, ಸ್ಥಳೀಯರು ಆನೆ ಮರಿಯನ್ನು ದಡಕ್ಕೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಸಾವಿಗೆ ಕಾರಣದ ಬಗ್ಗೆ ಆಂತರಿಕ ಅವಯವಗಳನ್ನು ತಜ್ಞ ತಪಾಸಣೆಗೆ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದ್ದು , ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಅರಣ್ಯಾ ಅಧಿಕಾರಿಗಳು ತಿಳಿಸಿದ್ದಾರೆ .

ಸುಮಾರು ಮೂರು ವರ್ಷ ಪ್ರಾಯ ಅಂದಾಜಿಸಲಾಗಿದೆ. ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು , ಮುಳಿಯಾರಿನ ಮೃಗಾಸ್ಪತ್ರೆ ವೈದ್ಯರ ತಂಡವು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿತು . ಆನೆಯ ದೇಹದ ಮೇಲೆ ಯಾವುದೇ ಗಾಯ ಕಂಡು ಬಂದಿಲ್ಲ . ಆದರೆ ಸಾವಿಗೆ ಕಾರಣ ಪತ್ತೆ ಹಚ್ಚಲು ಆಂತರಿಕ ಅವಯವ ಗಳನ್ನು ವಯನಾಡಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಬಳಿಕ ಸ್ಪಷ್ಟ ಕಾರಣ ತಿಳಿದುಬರಲಿದೆ.

See also  ಶಿವಮೊಗ್ಗದ ಒಂದೇ ಕುಟುಂಬದ ನಾಲ್ಕು ಮಂದಿಗೆ ಹೊಸ ಕೊರೋನಾ ಸೋಂಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು