News Kannada
Tuesday, December 06 2022

ಕರ್ನಾಟಕ

ಬೇಬಿಬೆಟ್ಟದ ಗಣಿಗಾರಿಕೆಗೆ ಮಠದ ಗೋಡೆಗಳಲ್ಲಿ ಬಿರುಕು

Photo Credit :

ಬೇಬಿಬೆಟ್ಟದ ಗಣಿಗಾರಿಕೆಗೆ ಮಠದ ಗೋಡೆಗಳಲ್ಲಿ ಬಿರುಕು

ಪಾಂಡವಪುರ: ಜಿಲ್ಲಾಧಿಕಾರಿಗಳ ನಿಷೇಧಾಜ್ಞೆ ಆದೇಶದ ನಡುವೆಯೂ ತಾಲೂಕಿನ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಪರಿಣಾಮ ಶ್ರೀರಾಮಯೋಗೇಶ್ವರ ಮಠದ ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ.

ರಾತ್ರಿ ವೇಳೆ ಕಲ್ಲು ಸಿಡಿತದ ಸ್ಪೋಟಗಳು ನಿರಂತರವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ, ಕಿವಿಯಿದ್ದೂ ಕಿವುಡರಾಗಿದ್ದಾರೆ. ಅಕ್ರಮ ಗಣಿಗಾರಿಕೆ ಹಾಗೂ ಗಣಿ ಸಾಮಗ್ರಿಗಳ ತಡೆಗೆ ಜಿಲ್ಲಾಧಿಕಾರಿಗಳು ನೇಮಿಸಿರುವ ನೋಡಲ್ ಅಧಿಕಾರಿಗಳು ಕೇವಲ ನಾಮಕಾವಸ್ಥೆಗಷ್ಟೇ ಉಳಿದುಕೊಂಡಿದ್ದಾರೆ.

ಬೇಬಿ ಬೆಟ್ಟದಲ್ಲಿ ಸಂಭವಿಸುತ್ತಿರುವ ಕಲ್ಲು ಸ್ಪೋಟಗಳಿಂದ ಅಲ್ಲಿರುವ ಶ್ರೀ ರಾಮಯೋಗೇಶ್ವರ ಮಠದ ಕಟ್ಟಡ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಶ್ರೀ ಸದಾಶಿವ ಸ್ವಾಮಿಗಳ ಗದ್ದುಗೆಗೂ ಅಪಾಯ ಎದುರಾಗುವ ಆತಂಕ ಸೃಷ್ಠಿಯಾಗಿದೆ. ಹಗಲು ಹೊತ್ತಿನಲ್ಲಿ ಆಗೊಮ್ಮ-ಈಗೊಮ್ಮೆ ಕಲ್ಲುಗಳನ್ನು ಸಿಡಿಸುವ ಗಣಿ ಮಾಲೀಕರು ರಾತ್ರಿ ವೇಳೆಯಲ್ಲಂತೂ ನಿರಂತರವಾಗಿ ಕಲ್ಲುಗಳನ್ನು  ಸ್ಪೋಟಿಸುತ್ತಿದ್ದಾರೆ. ಕಲ್ಲು ಸ್ಪೋಟಕ್ಕೆ ಯಾವುದೇ ಅನುಮತಿ ಪಡೆಯದಿದ್ದರೂ ಅಕ್ರಮವಾಗಿ ನಿಷೇಧಿತ ಸ್ಪೋಟಕಗಳನ್ನು ಬಳಸಿ ಎಗ್ಗಿಲ್ಲದೆ ಕಲ್ಲು ಸಿಡಿಸುತ್ತಿದ್ದಾರೆ. ಇಡೀ ಮಠ ಗಣಿ ಸ್ಪೋಟದಿಂದ ನಡುಗಲಾರಂಭಿಸಿದೆ ಎಂದು ಮಠದವರು ಭಯಭೀತರಾಗಿ ಹೇಳುತ್ತಿದ್ದಾರೆ.

ಬೇಬಿ ಬೆಟ್ಟದಲ್ಲಿರುವ ಶ್ರೀ ಶ್ರೀರಾಮಯೋಗೇಶ್ವರ ಮಠದ ಶ್ರೀ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ವಾಸ್ತವಾಂಶದ ಅರಿವಿದ್ದರೂ ಗಣಿಗಾರಿಕೆ ನಿಷೇಧಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ. ಗಣಿಗಾರಿಕೆಯಿಂದ ಬೇಬಿ ಬೆಟ್ಟದ ಸುತ್ತಮುತ್ತಲ ಪರಿಸರ, ಕೃಷಿ ನಾಶವಾಗುತ್ತಿದ್ದರೂ ಯಾರಿಗೂ ಅದರ ಬಗ್ಗೆ ಚಿಂತೆ ಇಲ್ಲ. ಗಣಿ ಮಾಲೀಕರೊಂದಿಗೆ ಕೈಜೋಡಿಸಿರುವ ಅಧಿಕಾರಿಗಳಿಗೆ ಜನರ ಬವಣೆ ಬೇಕಿಲ್ಲ. ಹಣ ಪಡೆದು ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಾ ಜನರ ಬದುಕನ್ನು ನರಕಕ್ಕೆ ತಳ್ಳಿದ್ದಾರೆ. ಗಣಿ ಸ್ಪೋಟದಿಂದ ತತ್ತರಿಸಿರುವ ಜನರು ಹೇಳುವ ಆಕ್ರೋಶದ ಮಾತಾಗಿದೆ.

ಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬೇಬಿ ಬೆಟ್ಟದಲ್ಲಿ ಯಾವುದೇ ಕಾನೂನಿನ ಭಯವಿಲ್ಲದೆ ಗಣಿ ಮಾಲೀಕರು ರಾಜಾರೋಷವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಮಠದ ವಾತಾವರಣ, ನೆಮ್ಮದಿಗೆ ಭಂಗವಾಗಿದೆ. ರಾತ್ರಿ ವೇಳೆ ಓಡಾಡಲು ಸಾಧ್ಯವಾಗದಂತಾಗಿದ್ದು, ರಾತ್ರಿ ಇಡೀ ವಾಹನಗಳ ಸಂಚಾರದಿಂದ ಭಯದ ವಾತಾವರಣ ಸೃಷ್ಠಿಯಾಗಿದೆ. ಗಣಿ ಸ್ಪೋಟದಿಂದ ಶ್ರೀಮಠದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಗಣಿಗಾರಿಕೆಯಿಂದ ಮೇಲೇಳುವ ಧೂಳು, ಸ್ಪೋಟದಿಂದ ಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ. ರಾತ್ರಿ ವೇಳೆ ನಡೆಯುವ ಸ್ಪೋಟಗಳಿಗೆ ಬೆಚ್ಚಿ ಭಕ್ತರು ಯಾರೂ ಇಲ್ಲಿ ಉಳಿದುಕೊಳ್ಳುತ್ತಿಲ್ಲ. ಶ್ರೀಮಠ ಗಣಿಗಾರಿಕೆಯಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿವೆ. ತಕ್ಷಣವೇ ಗಣಿಗಾರಿಕೆ ನಿಷೇಧಕ್ಕೆ ಅಧಿಕಾರಿಗಳು ಕ್ರಮ ವಹಿಸುವಂತೆ ಆಗ್ರಹಿಸಿದರು.

ಗಣಿಗಾರಿಕೆ ನಡೆಸುವವರು ಪ್ರಭಾವಿಗಳಾಗಿದ್ದಾರೆ. ಅಧಿಕಾರಿಗಳು ದಾಳಿ ನಡೆಸುವ ಸಮಯದಲ್ಲಿ ಯಾವುದೇ ಚಟುವಟಿಕೆಯನ್ನು ನಡೆಸದ ಮಾಲೀಕರು ಅವರು ಅಲ್ಲಿಂದ ಹೊರಡುತ್ತಿದ್ದಂತೆ ಗಣಿಗಾರಿಕೆಗೆ ಚಾಲನೆ ಕೊಡುತ್ತಾರೆ. ಇದರಲ್ಲಿ ಅಧಿಕಾರಿಗಳ ಪಾತ್ರವೂ ಇದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಸುಳಿವನ್ನು ಅವರ ಜೊತೆಯಲ್ಲಿರುವವರೇ ನೀಡುತ್ತಿದ್ದಾರೆ. ಗಣಿಗಾರಿಕೆ ನಿಯಂತ್ರಿಸುವ ಶಕ್ತಿ ಕಳೆದುಕೊಂಡಿರುವ ಅಧಿಕಾರಿಗಳು ಗಣಿ ಮಾಲೀಕರೊಂದಿಗೆ ಕೈಜೋಡಿಸಿರುವುದರಿಂದ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

See also  ಅತ್ಯಾಚಾರ ಪ್ರಕರಣ; ಬಾಲಕಿಯ ಮೇಲೆ 17 ಮಂದಿಯಿಂದ ಲೈಂಗಿಕ ದೌರ್ಜನ್ಯ

ಗಣಿಗಾರಿಕೆಯಿಂದ ಸ್ಥಳೀಯ ಜನರು ಯಾರೂ ಉಪಯೋಗವನ್ನು ಪಡೆಯುತ್ತಿಲ್ಲ. ಎಲ್ಲ ಕೆಲಸವನ್ನು ಮಿಷನರಿಗಳೇ ಮಾಡುತ್ತಿವೆ. ಗಣಿ ಕೆಲಸದಲ್ಲಿ ಸ್ಥಳೀಯರು ಕೆಲಸ ನಿರ್ವಹಿಸದೆ ಹೊರಗಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗಣಿಗಾರಿಕೆಯಿಂದ ಆಗುವ ಅಪಾಯವನ್ನು ಅರಿತು ಶ್ರೀ ಸದಾಶಿವ ಸ್ವಾಮಿಗಳು ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ  ಹಿಂದೊಮ್ಮೆ ಉಪವಾಸ ನಡೆಸಿದ್ದರು. ಅವರ ಲಿಂಗೈಕ್ಯವಾದ ನಂತರದಲ್ಲಿ ಗಣಿ ಚಟುವಟಿಕೆ ವಿಪರೀತವಾಗಿದೆ. ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿರುವ 200-300 ವರ್ಷಗಳ ಮರಗಳ ಮೇಲೆ ಗಣಿ ಧೂಳು ಬಿದ್ದು ಒಣಗುತ್ತಿವೆ. ಉತ್ತಮ ಪರಿಸರ, ವಾತಾವರಣದಿಂದ ಕೂಡಿದ್ದ ಪರಿಸರ ಈಗಂತೂ ನೋಡುವುದಕ್ಕೆ ಸಾಧ್ಯವಾಗದಷ್ಟು ಹದಗೆಟ್ಟುಹೋಗಿದೆ. ಕೂಡಲೇ ಗಣಿಗಾರಿಕೆ ನಿಷೇಧಕ್ಕೆ ಕ್ರಮ ವಹಿಸದಿದ್ದರೆ ಭಕ್ತರೊಡಗೂಡಿ ಉಪವಾಸ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು