News Kannada
Tuesday, September 27 2022

ಕರ್ನಾಟಕ

ಕಾಸರಗೋಡು ಇಂದು 14 ಮಂದಿಗೆ ಕೊರೋನಾ - 1 min read

Photo Credit :

ಕಾಸರಗೋಡು ಇಂದು 14 ಮಂದಿಗೆ ಕೊರೋನಾ

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 14 ಮಂದಿಗೆ  ಕೊರೋನಾ ಸೋಂಕು ದೃಢಪಟ್ಟಿದ್ದು. 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.

ಸೋಂಕು ಖಚಿತಗೊಂಡವರಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರು. ಒಬ್ಬರು ಕೊಲ್ಲಿ ರಾಷ್ಟ್ರದಿಂದ  ಬಂದವರು. ಕೊಲ್ಲಿರಾಷ್ಟ್ರದಿಂದ ಆಗಮಿಸಿದ 38 ವರ್ಷ ಪ್ರಾಯದ ಉದುಮಾ ನಿವಾಸಿಗೆ ಸೋಂಕು ಖಚಿತವಾಗಿದೆ.

ಮಹಾರಾಷ್ಟ್ರದಿಂದ ಆಗಮಿಸಿವರಲ್ಲಿ 8 ಮಂದಿ ಕುಂಬಳೆ ನಿವಾಸಿಗಳು, ಇಬ್ಬರು ವರ್ಕಾಡಿ ನಿವಾಸಿಗಳು, ವರ್ಕಾಡಿ, ಮೀಂಜ, ಉದುಮಾ, ಕುಂಬಡಾಜೆ ನಿವಾಸಿಗಳಾದ ತಲಾ ಒಬ್ಬರು ರೋಗ ತಗುಲಿದವರು. ಇವರಲ್ಲಿ 6 ಮಂದಿ ಮೇ 18ರಂದು ಮುಂಬಯಿಯಿಂದ ಆಗಮಿಸಿದವರು. ಇವರು ಕುಂಬಳೆ ನಿವಾಸಿಗಳಾದ 57,62, 52, 60, 26 ವರ್ಷದವರು. ಕುಂಬಡಾಜೆ ನಿವಾಸಿ 52 ವರ್ಷ ಪ್ರಾಯದವರು. ಪುಣೆಯಿಂದ ಆಗಮಿಸಿದ 33, 45 ವರ್ಷದವರಿಗೆ ಸೋಂಕು ಖಚಿತವಾಗಿದೆ.

ಮುಂ ಬಯಿಯಿಂದ ಬಂದ 30,47 ವರ್ಷದ ಸಹೋದರರಿಗೆ, ಮುಂಬಯಿಯಿಂದ ಆಗಮಿಸಿದ 54 ವರ್ಷದ ವರ್ಕಾಡಿ ನಿವಾಸಿಗೆ, 50 ವರ್ಷದ ಮೀಂಜ ನಿವಾಸಿಗೆ, ಬೆಂಗಳೂರಿನಿಂದ ಆಗಮಿಸಿದ 38 ವರ್ಷದ  ಉದುಮಾ ನಿವಾಸಿಗೆ ಸೋಂಕು ಖಚಿತವಾಗಿದೆ.

ಜಿಲ್ಲೆಯಲ್ಲಿ ಸೋಮವಾರ 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ನಗರಸಭೆಯ ನಿವಾಸಿ 66 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿಗಳಾದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ದಂತೆ ನಾಲ್ವರು ಕಳ್ಳಾರ್ ನಿವಾಸಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 3180 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2589 ಮಂದಿ, ಆಸ್ಪತ್ರೆಗಳಲ್ಲಿ 591 ಮಂದಿ ನಿಗಾದಲ್ಲಿದ್ದಾರೆ. 213 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯಲ್ಲಿ 6217 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5617 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 184 ಮಂದಿಯ ಫಲಿತಾಂಶ ಲಭಿಸಿಲ್ಲ.

See also  ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಹತ್ತು ವರ್ಷ ಕಠಿಣ ಸಜೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು