News Kannada
Wednesday, October 05 2022

ಕರ್ನಾಟಕ

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆ - 1 min read

Photo Credit :

 ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆ

ಯಾದಗಿರಿ: ಜಿಲ್ಲೆಯಲ್ಲಿ ಮೇ 30ರಂದು ಶನಿವಾರ 5 ವರ್ಷದೊಳಗಿನ 3 ಮಕ್ಕಳು ಸೇರಿದಂತೆ ಒಟ್ಟು 18 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋವಿಡ್-19 ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 241 ಪ್ರಕರಣಗಳ ಪೈಕಿ 11 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಪುಟಪಾಕ್ ಗ್ರಾಮದ 29 ವರ್ಷದ ಪುರುಷ (ಪಿ-2797), ಪುಟಪಾಕ್ ಗ್ರಾಮದ 20 ವರ್ಷದ ಮಹಿಳೆ (ಪಿ-2798), ಗುರುಮಠಕಲ್‍ನ 45 ವರ್ಷದ ಪುರುಷ (ಪಿ-2799), ಗುರುಮಠಕಲ್‍ನ 40 ವರ್ಷದ ಮಹಿಳೆ (ಪಿ-2800), ಗುರುಮಠಕಲ್ ತಾಲ್ಲೂಕಿನ ಕೇಶ್ವಾರ್ ಗ್ರಾಮದ 43 ವರ್ಷದ ಪುರುಷ (ಪಿ-2801), ಕೇಶ್ವಾರ್ ಗ್ರಾಮದ 19 ವರ್ಷದ ಯುವಕ (ಪಿ-2802), ಕೇಶ್ವಾರ್ ಗ್ರಾಮದ 11 ವರ್ಷದ ಬಾಲಕ (ಪಿ-2803), ಪದ್ದೇಪಲ್ಲಿ ಗ್ರಾಮದ 39 ವರ್ಷದ ಪುರುಷ (ಪಿ-2804), ಮದ್ದೇಪಲ್ಲಿ ಗ್ರಾಮದ 32 ವರ್ಷದ ಪುರುಷ (ಪಿ-2805).

ಯಾದಗಿರಿ ತಾಲ್ಲೂಕಿನ ಅರಕೇರಾ ಬಿ. ಗ್ರಾಮದ 66 ವರ್ಷದ ಪುರುಷ (ಪಿ-2809), ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದ 17 ವರ್ಷದ ಯುವತಿ (ಪಿ-2810), ಯಾದಗಿರಿ ತಾಲ್ಲೂಕಿನ ಅರಕೇರಾ ತಾಂಡಾದ 30 ವರ್ಷದ ಪುರುಷ (ಪಿ-2811), ಅರಕೇರಾ ತಾಂಡಾದ 7 ವರ್ಷದ ಹೆಣ್ಣುಮಗು (ಪಿ-2812), ಅರಕೇರಾ ತಾಂಡಾದ 3 ವರ್ಷದ ಹೆಣ್ಣುಮಗು (ಪಿ-2813), ಅರಕೇರಾ ತಾಂಡಾದ 2 ವರ್ಷದ ಗಂಡುಮಗು (ಪಿ-2814), ಅರಕೇರಾ ತಾಂಡಾದ 1 ವರ್ಷದ ಹೆಣ್ಣುಮಗು (ಪಿ-2815), ಕೊಲಮಪಲ್ಲಿ ಗ್ರಾಮದ 19 ವರ್ಷದ ಯುವಕ (ಪಿ-2816), ಕೊಲಮಪಲ್ಲಿ ಗ್ರಾಮದ 16 ವರ್ಷದ ಯುವತಿ (ಪಿ-2817) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದವರು. ಈ 18 ಜನರನ್ನು ಗುರುಮಠಕಲ್‍ನ ಎಸ್.ಟಿ ಹಾಸ್ಟೆಲ್, ಗುರುಮಠಕಲ್‍ನ ಎಸ್.ಎಲ್.ಟಿ, ಯಾದಗಿರಿಯ ಡಾನ್ ಬಾಸ್ಕೋ ಶಾಲೆ, ಮಾತರ್ ತೆಲಂಗಾಣ ಹಾಗೂ ಲಿಂಗೇರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಜಿಲ್ಲೆಯ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ಪೇಪರ್ ಅನ್ನು ಬಳಸಬೇಕು. ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪಿನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473 253950 ಹಾಗೂ ವಾಟ್ಸ್‍ಆ್ಯಪ್ ಸಂಖ್ಯೆ 9449933946 ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

 

See also  ಕೇರಳ ಸಚಿವಾಲಯದಲ್ಲಿ ಬೆಂಕಿ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು