ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ ಮೂವರಿಗೆ ಕೋವಿಡ್ 19 ಪಾಸಿಟಿವ್ ಆಗಿದೆ. 6 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ಸೋಂಕು ಪಾಸಿಟಿವ್ ಆದವರಲ್ಲಿ ಇಬ್ಬರು ಮಹಾರಾಷ್ಟ್ರ ದಿಂದ ಬಂದವರು, ಒಬ್ಬರು ಕುವೈತ್ ನಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕುವೈತ್ ನಿಂದ ಆಗಮಿಸಿದ್ದ ಕಾಞಂಗಾಡ್ ನಗರಸಭೆ ವ್ಯಾಪ್ತಿಯ 38 ವರ್ಷದ ವ್ಯಕ್ತಿ, ಮಹಾರಾಷ್ಟ್ರ ದಿಂದ ಬಂದಿದ್ದ ಚೆರುವತ್ತೂರು ಗ್ರಾಮಪಂಚಾಯತ್ ನಿವಾಸಿ 33 ವರ್ಷದ ವ್ಯಕ್ತಿ, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನಿವಾಸಿ 63 ವರ್ಷದ ವ್ಯಕ್ತಿ ರೋಗ ಬಾಧಿತರು. ಇವರೆಲ್ಲರೂ ನಿಗಾದಲ್ಲಿದ್ದವರು.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 6 ಮಂದಿಗೆ ಸೋಂಕು ನೆಗೆಟಿವ್ ಆಗಿದೆ. ಮಹಾರಾಷ್ಟ್ರ ದಿಂದ ಆಗಮಿಸಿದ್ದ ಕುಂಬಳೆ ಗ್ರಾಮಪಂಚಾಯತ್ ನಿವಾಸಿಗಳಾದ 56,46, 57 ವರ್ಷದ ವ್ಯಕ್ತಿಗಳು, ಮಂಗಲ್ಪಾಡಿ ನಿವಾಸಿಗಳಾದ 33 ವರ್ಷದ ವ್ಯಕ್ತಿ, ದುಬಾಯಿಯಿಂದ ಬಂದಿದ್ದ ಮಧೂರು ಪಂಚಾಯತ್ ನಿವಾಸಿ 68 ವರ್ಷದ ವ್ಯಕ್ತಿ, 32 ವರ್ಷದ ಕೋಂಡೋಂ-ಬೇಳೂರು ಪಂಚಾಯತ್ ನಿವಾಸಿ ಗುಣಮುಖರಾದವರು.