News Kannada
Tuesday, September 27 2022

ಕರ್ನಾಟಕ

ಕಳಪೆ ಪಡಿತರ ಸರಬರಾಜು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಸಚಿವ ಕೆ.ಗೋಪಾಲಯ್ಯ - 1 min read

Photo Credit :

ಕಳಪೆ ಪಡಿತರ ಸರಬರಾಜು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಸಚಿವ ಕೆ.ಗೋಪಾಲಯ್ಯ

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಪಡಿತರ ವಿತರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಟಿಎಪಿಸಿಎಂಎಸ್ ಆಹಾರ ಧಾನ್ಯ ಸಗಟು ಗೋದಾಮಿಗೆ ಇಂದು ದಿಢೀರ್ ಭೇಟಿ ನೀಡಿ ಅಕ್ಕಿ, ಗೋಧಿ, ತೊಗರಿಬೇಳೆ ಮತ್ತು ಕಡಲೆಕಾಳುಗಳನ್ನು ಮೂಟೆಗಳನ್ನು ಬಿಚ್ಚಿ ಖುದ್ದು ಪರಿಶೀಲನೆ ನಡೆಸಿದರು.

ಗ್ರಾಹಕರಿಗೆ ವಿತರಿಸಲು ದಾಸ್ತಾನು ಮಾಡಿದ್ದ ಕಡಲೆಕಾಳಿನ ಮೂಟೆಯಲ್ಲಿ ಕಸಕಡ್ಡಿ ಕಂಡುಬಂದಿದ್ದರಿಂದ ಗುಣಮಟ್ಟವಿಲ್ಲದ ಕಾಳುಗಳ ವಿತರಣೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆ ಉಪನಿರ್ದೇಶಕ ಆರ್.ಡಿ.ಸುಬ್ರಹ್ಮಣ್ಯ ಅವರಿಗೆ ಆದೇಶಿಸಿದರು ಹಾಗೂ ಪಡಿತರ ವಿತರಣೆಗೂ ಮುನ್ನ ಪರಿಶೀಲಿಸಬೇಕು ಹಾಗೂ ಕಡಲೆ ಕಾಳಿನಲ್ಲಿನ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಗಟು ಗೋದಾಮುಗಳಿಗೆ ಸಾಗಿಸಿರುವ ಆಹಾರ ಧಾನ್ಯಗಳಲ್ಲಿ ಕಳಪೆ ಮಟ್ಟದ ಬೇಳೆ ಕಾಳುಗಳು ಸರಬರಾಜಾಗಿರುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕಳಪೆ ಪಡಿತರ ಸರಬರಾಜು ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಹಾಗೆಯೇ ಗುಣಮಟ್ಟವಿಲ್ಲದ ಕಾಳುಗಳನ್ನು ಹಿಂಪಡೆದು ಗುಣಮಟ್ಟದ ಬೇಳೆ ಕಾಳು ಪೂರೈಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಕಾಳು ಹೊರತುಪಡಿಸಿ ಉಳಿದೆಲ್ಲ ಪಡಿತರ ಗುಣಮಟ್ಟದ್ದಾಗಿದೆ. ಹೊಸಕೋಟೆ ಟಿಎಪಿಸಿಎಂಎಸ್ ಗೋದಾಮು ನಿರ್ವಹಣೆ ಉತ್ತಮವಾಗಿದೆ. ಇಲ್ಲಿನ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಮುಂಗಡ ಪಡಿತರ ವಿತರಣೆಯಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡುದಾರರ ಜತೆಗೆ ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರಿಗೆ ಹಾಗೂ ಬಡವರಿಗೆ ಆಧಾರ್ ಕಾರ್ಡ್ ಮಾನದಂಡದಲ್ಲಿ ಪಡಿತರ ವಿತರಣೆಯಾಗುತ್ತಿದೆ. ಎಲ್ಲಿಯೂ ಪಡಿತರ ವಿತರಣೆಯಲ್ಲಿ ಲೋಪವಾಗಬಾರದು ಎಂಬ ಕಾರಣಕ್ಕೆ ಖುದ್ದು ಪರಿಶೀಲನೆ ನಡೆಸುತ್ತಿರುವುದಾಗಿ ಸಚಿವರು ತಿಳಿಸಿದರು.
ಹೊಸಕೋಟೆ ತಹಶೀಲ್ದಾರ್ ಗೀತಾ, ಟಿಎಪಿಸಿಎಂಎಸ್ ನಿರ್ದೇಶಕ ಉಪ್ಪಾರಳ್ಳಿ ಮುನಿಯಪ್ಪ, ಬಾಬು ರೆಡ್ಡಿ, ಟಿಎಪಿಸಿಎಂಎಸ್ ಸಿಬ್ಬಂದಿ ಸೋಮಶೇಖರ್, ಗೋದಾಮು ಮೇಲ್ವಿಚಾರಕ ದೇವರಾಜ್ ಮತ್ತಿತರರು ಇದ್ದರು.

See also  ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ: ಅಧಿಕಾರಿಗಳಿಗೆ ಸಚಿವ ಪುಟ್ಟರಾಜು ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು