News Kannada
Thursday, October 06 2022

ಕರ್ನಾಟಕ

ರಾಮನಗರ ಕೆಡಿಪಿ ಸಭೆಯಲ್ಲಿ ಮುಖಾಮುಖಿಯಾದ ವಿರೋಧಿಗಳು - 1 min read

Photo Credit :

ರಾಮನಗರ ಕೆಡಿಪಿ ಸಭೆಯಲ್ಲಿ ಮುಖಾಮುಖಿಯಾದ ವಿರೋಧಿಗಳು

ರಾಮನಗರ: ಸಾಮಾನ್ಯವಾಗಿ ರಾಜಕೀಯ ನಾಯಕರು ಮಾಧ್ಯಮಗಳ ಮುಂದೆ ಆರೋಪ – ಪ್ರತ್ಯಾರೋಪ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಕೆಲವೊಮ್ಮೆ ಅದೇ ನಾಯಕರು ಸಭೆಗೆ ಆಗಮಿಸಿ ಮುಖಾಮುಖಿಯಾದಾಗ ಹೇಗೆ ಇರುತ್ತದೆ ಎಂಬುದರ ಬಗ್ಗೆ ಹಲವು ನಿದರ್ಶನಗಳು ಬೇಕಾದಷ್ಟಿವೆ.

ರಾಮನಗರದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಆಗಾಗ್ಗೆ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇದ್ದರು. ಹೀಗಾಗಿ ರಾಮನಗರದಲ್ಲಿ ಕರೆಯಲಾಗಿದ್ದ  ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ಅವರಿಬ್ಬರು ಎದುರಾದರೆ ಹೇಗಿರುತ್ತದೆ ಎಂಬ ಕುತೂಹಲವಿತ್ತು.

ಉಪಮುಖ್ಯಮಂತ್ರಿ ಸಿ.ಎನ್.ಅಶ್ವಥ್ ನಾರಾಯಣ ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಯಾವುದೇ ಸಭೆ ಸಮಾರಂಭಗಳಲ್ಲಿ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ವೇದಿಕೆ ಹಂಚಿಕೊಂಡಿರಲಿಲ್ಲ. ಮಾಧ್ಯಮಗಳ ಮೂಲಕವೇ ಇಬ್ಬರು ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ಹೀಗಾಗಿ ಕೆಡಿಪಿ ಸಭೆಯಲ್ಲಿ ವೇದಿಕೆ ಹಂಚಿಕೊಂಡ ರಾಜಕೀಯ ವೈರಿಗಳು ಏಟಿಗೆ ಎದುರೇಟು, ಟೀಕೆಗೆ ಪ್ರತಿ ಟೀಕೆ ಮಾಡುತ್ತಾ ಒಬ್ಬರ ಕಾಲನ್ನೊಬ್ಬರು ಎಳೆದುಕೊಂಡಿದ್ದಾರೆ.

ಸಭೆಯ ಪ್ರಾರಂಭಕ್ಕೆ ಸಂಸದ ಡಿ.ಕೆ.ಸುರೇಶ್ ಮಾತು ಆರಂಭಿಸಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಏನೇ ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಜನಪ್ರತಿನಿಧಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಈ ವಿಚಾರದಲ್ಲಿ ನೀವು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸದೆ ಹೋದರೆ ಆಡಳಿತ ಹೇಗೆ ನಡೆಯುತ್ತಿದೆ? ನಿಮಗೆ ಜನಪ್ರತಿನಿಧಿಗಳು ಲೆಕ್ಕಕ್ಕೆ ಇಲ್ಲವೇ? ಯಾರೂ ಬೇಡ ಅಂದರೆ ಹೇಳಿ, ನಾವ್ಯಾರು ಬರುವುದಿಲ್ಲ. ನಿಮ್ಮ ತೀರ್ಮಾನಗಳಿಗೆ ನಾವೇನಾದರು ವಿರೋಧ ಮಾಡುತ್ತಿದ್ದೇವೆಯೇ ಅಥವಾ ಇದರಲ್ಲಿ ಏನಾದರು ರಾಜಕಾರಣ ಅಡಗಿದೆಯೇ ಎಂದು ಪ್ರಶ್ನಿಸಿದರು.

ತುಮಕೂರಿನ ಕೆಡಿಪಿ ಸಭೆಗೆ ಸಚಿವ ಮಾಧುಸ್ವಾಮಿ ಅವರು ನನ್ನನ್ನು ಆಹ್ವಾನಿಸಿದ್ದರು. ಮುಖ್ಯಮಂತ್ರಿಗಳು ಶಾಸಕರು ಹಾಗೂ ಸಂಸದರ ಸಭೆ ಕರೆದಿದ್ದರು. ಅದು ನಿಮ್ಮಿಂದ ಏಕೆ ಸಾಧ್ಯವಾಗಲಿಲ್ಲ. ಒಂದು ವರ್ಷದಿಂದ ಜನಪ್ರತಿನಿಧಿಗಳ ಸಭೆ ಏಕೆ ನಡೆಸಲಿಲ್ಲ. ನೀವು ಏನನ್ನು ಕ್ಲೀನ್ ಮಾಡುತ್ತೀರೊ ಮಾಡಿ, ನಾವು ಬೇಡ ಅನ್ನುವುದಿಲ್ಲ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಾವುಗಳು ಭಾಗಿಯಾಗುವುದು ಬೇಡವೆಂದರೆ ಹೇಳಿಬಿಡಿ ಎಂದರು.

ಇದಕ್ಕೆ ಡಿಸಿಎಂ ಅಶ್ವಥ್ ನಾರಾಯಣ ಅವರು ಪ್ರತಿಕ್ರಿಯಿಸಲು ಮುಂದಾಗಿ “ಇಂದಿನ ತ್ರೈಮಾಸಿಕ ಸಭೆ” ಎನ್ನುತ್ತಿದ್ದಂತೆ ಸಂಸದ ಸುರೇಶ್ ಅವರು ಮಧ್ಯೆ ಪ್ರವೇಶಿಸಿ “ತ್ರೈಮಾಸಿಕ ಅಲ್ಲ ವಾರ್ಷಿಕ ಸಭೆ ಎಂದು ಹೇಳಿ ಅಂದಾಗ ಸಭೆಯಲ್ಲಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಗೆಗಡಲಲ್ಲಿ ತೇಲಿದರು.

ಈಗಿನದು ತ್ರೈಮಾಸಿಕ ಸಭೆಯೇ ಆದರೆ, ಮೂರು ವರ್ಷದ ನಂತರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಯಲಿದೆ. ಹಿಂದಿನವರು ಮಾಡಿದ ತಪ್ಪನ್ನು ಮುಂದುವರೆಸುವುದಿಲ್ಲ ಎಂದು ಅಶ್ವಥ್ ತಿರುಗೇಟು ನೀಡಿದರು.

ಚುನಾಯಿತ ಪ್ರತಿನಿಧಿಗಳನ್ನು ದೂರವಿಟ್ಟು ಕೆಲಸ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ ಸಹಕಾರದಿಂದ ಕೆಲಸ ಮಾಡುತ್ತೇನೆ. ನಾನು ಬಂದಾಗಲೆಲ್ಲ ಜನಪ್ರತಿನಿಧಿಗಳಿಗೂ ಆಹ್ವಾನ ನೀಡುವಂತೆ ಸೂಚನೆ ನೀಡುತ್ತೇನೆ. ನನ್ನಿಂದ ಸಂಸದರು ಸೇರಿದಂತೆ ಯಾರಿಗಾದರು ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.

See also  ಇನ್ಸ್ ಪೆಕ್ಟರ್ ನ ಅನೈತಿಕ ಸಂಬಂಧಕ್ಕೆ ಹತ್ತಿಕೊಂಡಿತು ಬೆಂಕಿ!

ಜಿಪಂ ಸದಸ್ಯ ಪ್ರಸನ್ನಕುಮಾರ್ ಅವರು ಮಾತನಾಡಿ ರಾಜೀವ ಗಾಂಧಿ ಆರೋಗ್ಯ ವಿವಿ ಸ್ಥಾಪನೆ ಕಾರ್ಯ ಏನಾಯಿತು ಎಂದು ಪ್ರಶ್ನಿಸಿದಾಗ ಸಂಸದ ಸುರೇಶ್ ಅವರು ಇವರೇ ಅಡ್ಡಗಾಲು ಹಾಕಿದವರು ಎಂದು ಅಶ್ವಥ್ ಅವರನ್ನು ಟೀಕಿಸಿದರು. ಆಗ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ ನಾವು ಅಡ್ಡಗಾಲು ಹಾಕಿದೆವು. ಆದರೆ ಡಿಕೆಶಿ ಸಹೋದರರು ಕಾಲು ಹಾಕಿಕೊಂಡಿದ್ದರು ಎಂದು ಟಾಂಗ್ ನೀಡಿದರು. ಆಗ ಮತ್ತೊಮ್ಮೆ ಸಭೆಯಲ್ಲಿ ನಗೆ ತೇಲಿಬಂತು. ಒಟ್ಟಾರೆ ಆರೋಗ್ಯ ಪೂರ್ಣ ಟೀಕೆಯೊಂದಿಗೆ ಸಭೆ ನಡೆದಿದ್ದು ವಿಶೇಷವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು