News Kannada
Wednesday, September 28 2022

ಕರ್ನಾಟಕ

ಬಿಡದಿ ಜನರ ಭೀತಿಗೆ ಕಾರಣವಾದ ಕೊರೋನಾ ಸೋಂಕಿತನ ಸಾವು! - 1 min read

Photo Credit :

ಬಿಡದಿ ಜನರ ಭೀತಿಗೆ ಕಾರಣವಾದ ಕೊರೋನಾ ಸೋಂಕಿತನ ಸಾವು!

ರಾಮನಗರ: ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಡದಿ ಪಟ್ಟಣದ ತರಕಾರಿ ವ್ಯಾಪಾರಿಗೆ ಸೋಂಕು ತಗುಲಿದ್ದರಿಂದ ಇಡೀ ಮಾರುಕಟ್ಟೆ ಪ್ರದೇಶದಲ್ಲಿ ಭೀತಿ ಆರಂಭವಾಗಿದೆ.

ತರಕಾರಿ ವ್ಯಾಪಾರಿಯಾಗಿದ್ದ ವ್ಯಕ್ತಿ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ನಂತರ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಸುದ್ದಿ ತಿಳಿದಿದ್ದರಿಂದ ಇಡೀ ಬಿಡದಿ ಪಟ್ಟಣದ ಜನತೆ ಬೆಚ್ಚಿಬೀಳುವಂತಾಗಿದೆ. ಇದಕ್ಕೆ ಕಾರಣವೂ ಇದೆ. 45 ವರ್ಷದ ಈ ವ್ಯಕ್ತಿ ಬಿಡದಿಯ ಹೊಸಬೀದಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ತರಕಾರಿ ವ್ಯಾಪಾರ ಮಾಡುತ್ತಿದ್ದ ಈತ ಕೇತುಗಾನಹಳ್ಳಿ ರಸ್ತೆಯಲ್ಲಿ ದೊಡ್ಡ ತರಕಾರಿ ಅಂಗಡಿಯೊಂದನ್ನು ತೆರೆದು ಮಾರಾಟ ಮಾಡುವ ಜೊತೆಗೆ ಬಿಡದಿ ಪಟ್ಟಣದಲ್ಲಿರುವ ಸುಮಾರು ಏಳೆಂಟು ಅಂಗಡಿಗಳಿಗೆ ನಿತ್ಯ ತರಕಾರಿಯನ್ನು ಸರಬರಾಜು ಮಾಡುತ್ತಿದ್ದನು.

 

ಈ ನಡುವೆ ಈತನಿಗೆ ಎದೆ ನೋವು ಕಾಣಿಸಿಕೊಂಡು ಉಸಿರಾಟದ ಸಮಸ್ಯೆ ತೀವ್ರವಾಗಿತ್ತು. ತಕ್ಷಣ ಚಿಕಿತ್ಸೆಗಾಗಿ ಸ್ಥಳಿಯ ಖಾಸಗಿ ಆಸ್ಪತ್ರೆಗೆ, ನಂತರ ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸೂಕ್ಷ್ಮತೆಯನ್ನು ಅರಿತ ವೈದ್ಯರು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ವೈದ್ಯರು ಆತನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದರಿಂದ ಸತ್ತ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಡದಿ ಪಟ್ಟಣದ ಜನ ಭಯ ಪಡುವಂತಾಗಿದೆ.

 

ಇದೀಗ ಮೃತ ವ್ಯಕ್ತಿಯ ಪತ್ನಿ ಮತ್ತು ಒಬ್ಬ ಪುತ್ರನಿಗೆ ಕೊರೋನಾ ವೈರಸ್ ಇರುವುದು ಆರೋಗ್ಯ ಇಲಾಖೆ ದೃಢಪಡಿಸಿದ್ದು, ಬಿಡದಿ ಪುರಸಭೆ ಅಧಿಕಾರಿಗಳು ಕೊರೋನಾ ಪಾಸಿಟಿವ್ ವ್ಯಕ್ತಿಗಳು ವಾಸವಿದ್ದ ಹೊಸಬೀದಿ ಮತ್ತು ತರಕಾರಿ ಅಂಗಡಿಯಿದ್ದ ಕೇತಗಾನಹಳ್ಳಿ ರಸ್ತೆ, ಹಾಗೂ ಪಕ್ಕದ ಆರ್‍ಜಿಎಸ್ ರಸ್ತೆಯನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಿ 28 ದಿನಗಳ ಕಾಲ ಸೀಲ್ ಡೌನ್ ಮಾಡಿ ಕ್ರಮಕೈಗೊಂಡಿದ್ದಾರೆ.

 

ಇನ್ನು ಮೃತಪಟ್ಟ ವ್ಯಾಪಾರಿ ಪುರಸಭೆ ಮುಖ್ಯರಸ್ತೆ ಮತ್ತು ಬಿಎಂಟಿಸಿ ಬಸ್ ನಿಲ್ದಾಣದ ಪಕ್ಕದ ರಸ್ತೆಯಲ್ಲಿ ಕೆಲವು ಅಂಗಡಿಗಳಿಗೆ ತರಕಾರಿಯನ್ನು ಸರಬರಾಜು ಮಾಡುತ್ತಿದ್ದ ಎನ್ನುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಧಿಕಾರಿಗಳು ಎರಡು ರಸ್ತೆಗಳನ್ನು ಬಫರ್ ಜೋನ್ ಎಂದು ಪರಿಗಣಿಸಿ ಒಂದು ವಾರದ ಕಾಲ ಅಂಗಡಿಗಳನ್ನು ಬಂದ್ ಮಾಡಲು ಕ್ರಮ ಜರುಗಿಸಿದ್ದಾರೆ. ಅಗತ್ಯ ವಸ್ತುಗಳಾದ ದಿನಸಿ ಮತ್ತು ತರಕಾರಿ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ.

 

ಕೊರೋನಾ ಮೊದಲ ಪಾಸಿಟಿವ್ ವ್ಯಕ್ತಿ ಸಂಪರ್ಕದಲ್ಲಿದ್ದ ಆತನ ಪತ್ನಿ ಮತ್ತು ಕಿರಿಯ ಪುತ್ರನಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ಇವರನ್ನು ರಾಮನಗರ ಕೋವಿಡ್ ರೆಫರೆಲ್ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಒಂದು ವಾರದ ಕಾಲ ಸಾರ್ವಜನಿಕ ಸಂಪರ್ಕ ನಿರ್ಬಂಧಕ್ಕೆ ಬಿಡದಿ ಪುರಸಭೆ ಹೊರಡಿಸಿರುವ ಆದೇಶವನ್ನು ಜನತೆ ತಲೆಬಾಗಿ ಸ್ವೀಕರಿಸುತ್ತಿದ್ದಾರೆ. ಬಿಡದಿಗೆ ಕೊರೋನಾ ಪ್ರವೇಶ ಮಾಡುತಿದ್ದಂತೆ ಪಟ್ಟಣ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ತಲ್ಲಣ ಕಂಡುಬಂದಿದೆ. ಸೀಲ್ ಡೌನ್ ಆಗಿರುವ ಕಂಟೋನ್ಮೆಂಟ್ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಪುರಸಭೆಯ 4 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಇವರು ಹಗಲು ರಾತ್ರಿ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

See also  ದಿಡ್ಡಳ್ಳಿ-ತಟ್ಟಳ್ಳಿ ಆದಿವಾಸಿಗಳ ಗುಡಿಸಲು ತೆರವಿಗೆ ಖಂಡನೆ

 

ಕಂಟೋನ್ಮೆಂಟ್ ಪ್ರದೇಶದಲ್ಲಿ 40 ಕುಟುಂಬಗಳಿದ್ದು 130 ಜನಸಂಖ್ಯೆಯಿದೆ. ಪುರಸಭೆ ವತಿಯಿಂದ ಪ್ರತಿದಿನ ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸಲಾಗುತ್ತಿದ್ದು, ಪಕ್ಕದ ವಾರ್ಡುಗಳಲ್ಲೂ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಜನಜಾಗೃತಿಗಾಗಿ ಪ್ರಚಾರ ಕಾರ್ಯವನ್ನು ನಡೆಸಲಾಗುತ್ತಿದೆ. ಒಟ್ಟಾರೆ ಭಯದ ವಾತಾವರಣ ಈ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು