News Kannada
Wednesday, September 28 2022

ಕರ್ನಾಟಕ

ಪೊಲೀಸ್ ಅಧಿಕಾರಿಗೆ ಕೊರೋನಾ ಸೋಂಕು ತಂದ ಫಜೀತಿ - 1 min read

Photo Credit :

ಪೊಲೀಸ್ ಅಧಿಕಾರಿಗೆ ಕೊರೋನಾ ಸೋಂಕು ತಂದ ಫಜೀತಿ

ಎಚ್.ಡಿ.ಕೋಟೆ: ತಾಲೂಕಿನ ಪೊಲೀಸ್ ಇಲಾಖೆ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವುದರಿಂದ ಅವರ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೊಳಪಡಿಸಿದ್ದು, ಕಾರ್ಯನಿರ್ವಹಿಸುತ್ತಿದ್ದ ಠಾಣೆ, ಚಿಕಿತ್ಸೆ ಪಡೆದಿದ್ದ ಕ್ಲಿನಿಕ್, ಓಡಾಡಿದ್ದ ಕಟ್ಟಡಗಳನ್ನು ಸ್ಯಾನಿಟೈಸರ್ ಮಾಡಲಾಗಿದೆ.

ಈ ಅಧಿಕಾರಿ ಕಳೆದ ಐದಾರು ದಿನಗಳಿಂದ ಅನಾರೋಗ್ಯದಿಂದ ಇದ್ದು ಕಳೆದ ಮೂರು ದಿನಗಳ ಹಿಂದೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರ ಗಂಟಲು ದ್ರವವನ್ನು ಸಂಗ್ರಹಿಸಿದ್ದರು. ವರದಿಯಲ್ಲಿ ಕೊರೋನಾ ದೃಢಪಟ್ಟ ನಂತರ, ಮೈಸೂರಿನ ಅಪೆÇಲೋ ಆಸ್ಪತ್ರೆಯಲ್ಲಿದ್ದ ಅವರನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದೀಗ ಪಟ್ಟಣದ ಹುಣಸೂರು-ಬೇಗೂರು ರಸ್ತೆಯಲ್ಲಿರುವ ವೃತ್ತ ನಿರೀಕ್ಷಕರ ಕಚೇರಿ ಮತ್ತು ಪಟ್ಟಣ ಠಾಣೆಯ ಎರಡು ಕಟ್ಟಡಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಠಾಣಾ ಹಿಂಭಾಗವಿರುವ ಪೊಲೀಸ್ ವಸತಿ ಗೃಹಗಳಿಂದ ಯಾರೂ ಹೊರ ಬರದಂತೆ ಸೂಚಿಸಲಾಗಿದೆ. ವೃತ್ತ ನಿರೀಕ್ಷಕರ ಸಂಪರ್ಕದಲ್ಲಿದ್ದ ಸುಮಾರು 20 ಪೊಲೀಸರನ್ನು ಈಗಾಗಲೇ ಹೋಂ ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸರು ಸೇರಿದಂತೆ 60 ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ.

 

ಸೋಂಕಿತ ಪೊಲೀಸ್ ಅಧಿಕಾರಿ ಮೈಸೂರಿನ ಆಸ್ಪತ್ರೆಗೆ ತೆರಳುವ ಮುನ್ನ, ಪಟ್ಟಣದ ಹುಣಸೂರು-ಬೇಗೂರು ರಸ್ತೆಯಲ್ಲಿರುವ ಖಾಸಗಿ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದಿದ್ದ ಹಿನ್ನೆಲೆಯಲ್ಲಿ ಕ್ಲಿನಿಕ್‍ನ್ನು ಸ್ಯಾನಿಟೈಸ್ ಮಾಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಎಚ್.ಡಿ.ಕೋಟೆ ಪಟ್ಟದಲ್ಲಿರುವ ಮಿನಿ ವಿಧಾನಸೌಧ ಮತ್ತು ಪುರಸಭೆ ಕಚೇರಿಗಳನ್ನು ಬಂದ್ ಮಾಡಿದ್ದು, ಸ್ಯಾನಿಟೈಸ್ ಮಾಡಿದ್ದು, ಮುಂದಿನ ಎರಡು ದಿನಗಳ ಕಾಲ ಸಾರ್ವಜನಿಕರು ಕಚೇರಿಗೆ ಬರದಂತೆ ಸೂಚಿಸಲಾಗಿದೆ.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಆಡಳಿತದ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಇದ್ದ ತಹಸೀಲ್ದಾರ್ ಆರ್. ಮಂಜುನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ ಸೇರಿದಂತೆ ಅಂದು ಸಭೆಯಲ್ಲಿ ಹಾಜರಿದ್ದ ಅನೇಕ ಅಧಿಕಾರಿಗಳು ಮತ್ತು ಕೆಲವು ಪತ್ರಕರ್ತರು ಸ್ವಯಂಕೃತವಾಗಿ ಹೋಂ ಕ್ವಾರಂಟೈನ್ ಒಳಗಾಗಿದ್ದಾರೆ. ಹಲವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗುವುದು. ವರದಿ ಬಂದ ನಂತರ ಮನೆಯಿಂದ ಹೊರಗೆ ಬಂದು ಕರ್ತವ್ಯ ನಿರ್ವಹಿಸಲಿದ್ದೇವೆ. ಅಲ್ಲಿಯ ತನಕ ಮನೆಯಿಂದಲೇ ಕೆಲಸ ಮಾಡಲಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಪುಟ್ಟಸ್ವಾಮಿಯವರಿಗೆ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣ ವ್ಯಾಪ್ತಿಯಲ್ಲಿರುವ ಹೇರ್ ಕಟ್ಟಿಂಗ್ ಸೆಲೂನ್‍ಗಳನ್ನು ಮುಂದಿನ ಒಂದು ತಿಂಗಳ ಮಟ್ಟಿಗೆ ಬಂದ್ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ರೇವಣ್ಣ ತಿಳಿಸಿದ್ದಾರೆ.

 ಪಟ್ಟಣ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ರಾಸಾಯನಿಕ ದ್ರವ ಸಿಂಪಡಣೆ ಮಾಡುವ ಹಿನ್ನೆಲೆಯಲ್ಲಿ ಮತ್ತು ಪುರಸಭೆ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂಕೃತರಾಗಿ ಬಂದ್ ಮಾಡಿದ್ದಾರೆ.

See also  ಯುವತಿ ವಿಷಯಕ್ಕೆ ಓರ್ವನ ಕೊಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು