News Kannada
Sunday, October 02 2022

ಕರ್ನಾಟಕ

ಮದ್ದೂರಿನ ಸೀಲ್ ಡೌನ್ ನಿವಾಸಿಗಳಿಂದ ಪ್ರತಿಭಟನೆ - 1 min read

Photo Credit :

ಮದ್ದೂರಿನ ಸೀಲ್ ಡೌನ್ ನಿವಾಸಿಗಳಿಂದ ಪ್ರತಿಭಟನೆ

ಮದ್ದೂರು: ಪಟ್ಟಣದ ಲೀಲಾವತಿ ಬಡಾವಣೆಯಲ್ಲಿರುವ ಕೀರ್ತನಾ ಕಾಂಪ್ಲೆಕ್ಸ್ ನಲ್ಲಿ ಮೂವರು ಕೊರೋನಾ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಿದ್ದು, ಪುರಸಭಾ ಅಧಿಕಾರಿಗಳು ಇಲ್ಲಿಯ ನಿವಾಸಿಗಳಿಗೆ ದಿನನಿತ್ಯದ ವಸ್ತುಗಳನ್ನು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ನಿವಾಸಿಗಳು ಕಾಂಪ್ಲೆಕ್ಸ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಕಾಂಪ್ಲೆಕ್ಸ್ ಸೀಲ್‍ಡೌನ್ ಮಾಡಿರುವುದರಿಂದ ನಮಗೆ ದಿನನಿತ್ಯದ ಆಹಾರ ಪದಾರ್ಥಗಳು, ಹಾಲು, ಔಷಧಿಗಳು ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದ್ದರೂ  ಪುರಸಭಾ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಸೀಲ್ ಡೌನ್ ಮಾಡಿ ಸುಮಾರು 8 ದಿನಗಳು ಕಳೆದಿದೆ. ಕಾಂಪ್ಲೆಕ್ಸ್ ನಲ್ಲಿ ಹಲವಾರು ಮನೆಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ನಮಗೆ ಬೇಕಾದ ವಸ್ತುಗಳನ್ನು ಹಣ ಕೊಡುತ್ತೇವೆ ಎಂದರೂ ತಂದು ಕೊಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪುರಸಭಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಉಡಾಫೆಯಾಗಿ ವರ್ತನೆ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆಯಲ್ಲಿ ಹಿರಿಯರು, ಮಕ್ಕಳು, ಹೆಂಗಸರು ಇದ್ದಾರೆ. ಹಿರಿಯರಿಗೆ ಮಧುಮೇಹ, ರಕ್ತದೊತ್ತಡ ಸೇರಿದಂತೆ ಇನ್ನಿತರ ರೋಗಗಳ ಮಾತ್ರೆಗಳನ್ನು ಕೂಡ ತಂದು ಕೊಡುತ್ತಿಲ್ಲ. ಇದರಿಂದ ಆರೋಗ್ಯ ಕೆಡುತ್ತಿದೆ. ಈ ರೀತಿಯಾದರೆ ನಾವು ಜೀವನ ನಡೆಸುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಶೀಘ್ರವಾಗಿ ನಮಗೆ ಬೇಕಾದ ವಸ್ತುಗಳನ್ನು ತಂದು ಕೊಡದೆ ಹೋದರೆ ಮುಂದಿನ ದಿನಗಳಲ್ಲಿ ನಾವುಗಳೇ ಮಾರುಕಟ್ಟೆಗೆ ಬಂದು ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ. ಇದರ ಪರಿಣಾಮವನ್ನು ಪುರಸಭಾ ಅಧಿಕಾರಿಗಳು ಎದುರಿಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ನಿವಾಸಿಗಳು ಹಾಜರಿದ್ದರು.

See also  ಉಪನ್ಯಾಯಾಲಯದ ವಜ್ರಮಹೋತ್ಸವಕ್ಕೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು