News Kannada
Monday, December 05 2022

ಕರ್ನಾಟಕ

ಕೆ.ಆರ್.ಎಸ್ ಜಲಾಶಯದಿಂದ ನಾಲೆಗಳಿಗೆ  ನೀರು

Photo Credit :

ಕೆ.ಆರ್.ಎಸ್ ಜಲಾಶಯದಿಂದ ನಾಲೆಗಳಿಗೆ  ನೀರು

ಮಂಡ್ಯ: ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಕೃಷ್ಣರಾಜಸಾಗರ ಜಲಾಶಯದಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹಣೆ ಮತ್ತು ಆಗಸ್ಟ್ 2020 ರಿಂದ ಡಿಸೆಂಬರ್ 2020ರ ವರೆಗೆ ಬರಬಹುದಾದ ಮತ್ತು ಕಳೆದ 20 ವರ್ಷಗಳ ಒಳಹರಿವಿನ ಪ್ರಮಾಣವನ್ನು ಆಧರಿಸಿ ಹಾಗೂ ನಿರೀಕ್ಷಿತ ಒಳಹರಿವಿನ ಪರಿಮಾಣವನ್ನು ಪರಿಗಣಿಸಿ, ಮುಂಗಾರು ಬೆಳೆಗಳಿಗೆ ಜುಲೈ 28 ರಿಂದ ಆಗಸ್ಟ್ 16ರ ವರೆಗೆ, ಆಗಸ್ಟ್ 27 ರಿಂದ ಸೆಪ್ಟೆಂಬರ್ 15ರ ವರೆಗೆ, ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15ರ ವರೆಗೆ, ಅಕ್ಟೋಬರ್ 26 ರಿಂದ ನವೆಂಬರ್ 14ರ ವರೆಗೆ ಹಾಗೂ ನವೆಂಬರ್ 25 ರಿಂದ ಡಿಸೆಂಬರ್ 14ರ ವರೆಗೆ ಪ್ರತಿ ತಿಂಗಳು ವಿ.ಸಿ.ನಾಲೆ ಮತ್ತು ಅಣೆಕಟ್ಟು ನಾಲೆಗಳಲ್ಲಿ ತಿಂಗಳಿನ 20 ದಿನ ನಾಲೆಗಳಲ್ಲಿ ನೀರು ಹರಿಸಿ ಉಳಿದ 10 ದಿನ ನೀರನ್ನು ನಿಲ್ಲಿಸುವ ಕಟ್ಟು ನೀರಿನ ಪದ್ಧತಿಯನ್ನು ಅಳವಡಿಸಿ ನೀರನ್ನು ಹರಿಸುವ ವ್ಯವಸ್ಥೆ ಮಾಡಲಾಗಿದೆ.

ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇರುವ ಹಿನ್ನೆಲೆಯಲ್ಲಿ, ರೈತಬಾಂಧವರು ಅಲ್ಪಾವಧಿ ಬೆಳೆಗಳನ್ನು ಮಾತ್ರ ಬೆಳೆಯಲು, ನೀರನ್ನು ಸಮರ್ಪಕವಾಗಿ ಹಾಗೂ ಮಿತಬಳಕೆಯಲ್ಲಿ ಉಪಯೋಗಿಸಲು ವಿನಂತಿಸಲಾಗಿದೆ. ನಿಗಧಿತ ಅಲ್ಪಾವಧಿ ಬೆಳೆಗಳನ್ನು ಹೊರತುಪಡಿಸಿ, ಇತರ ಪ್ರಮುಖ ಬೆಳೆಗಳನ್ನು ಬೆಳೆದರೆ ಅದರಿಂದಾಗುವ ಬೆಳೆ ನಷ್ಟಕ್ಕೆ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದು ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

See also  ನಂಬರ್ ಕೊಡ್ತಿಯಾ ಎಂದವನಿಗೆ ಸರಿಯಾಗಿ ಕೊಟ್ಟ ಮಹಿಳೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು