News Kannada
Thursday, December 01 2022

ಕರ್ನಾಟಕ

ಜೋಳದ ಹೊಲಕ್ಕೆ ನುಗ್ಗಿದ ಕಾಡಾನೆ - 1 min read

Photo Credit :

ಜೋಳದ ಹೊಲಕ್ಕೆ ನುಗ್ಗಿದ ಕಾಡಾನೆ

ಹನಗೋಡು: ಈಗಾಗಲೇ ಧಾರಾಕಾರವಾಗಿ ಮಳೆ ಸುರಿದು ಲಕ್ಷ್ಮಣತೀರ್ಥ ನದಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ರೈತರಿಗೆ ಇದೀಗ ಕಾಡಾನೆಗಳ ಭೀತಿ ಆರಂಭವಾಗಿದೆ. ಈಗಾಗಲೇ ನಾಗರಹೊಳೆ ಅಭಯಾರಣ್ಯದಿಂದ ಹೊರಬಂದ ಕಾಡಾನೆ ರೈತರು ಬೆಳೆದಿದ್ದ ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ನಾಶಮಾಡುತ್ತಿದೆ.

ಕಾಡಾನೆಯೊಂದು  ಆಹಾರವನ್ನರಸಿ ಕಾಡಿನಿಂದ ಹೊರ ಬಂದು  ಹನಗೋಡು ಸಮೀಪದ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಸುತ್ತ ಮುತ್ತಲ ಜಮೀನುಗಳಲ್ಲಿ  ಬೆಳೆದಿದ್ದ ಮುಸುಕಿನ ಜೋಳದ ಹೊಲಕ್ಕೆ ನುಗ್ಗಿ ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿದೆ. ಇದರಿಂದ ಹಲವು ರೈತರಿಗೆ ನಷ್ಟವಾಗಿದೆ.

ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ವೀರನಹೊಸಹಳ್ಳಿ ವಲಯದ ಅರಣ್ಯಾಧಿಕಾರಿ ರವೀಂದ್ರ, ಡಿ.ಆರ್.ಎಫ್.ಓ.ಗಳಾದ ನವೀನ್‍ಕುಮಾರ್, ಸಿಬ್ಬಂದಿ ಹಾಗೂ ಆರ್.ಆರ್.ಟಿ.ಯ 40ಕ್ಕೂ ಹೆಚ್ಚು ಮಂದಿಯನ್ನೊಳಗೊಂಡ ತಂಡವು ಆನೆಯನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡಿದ್ದಾರೆ.

ಕಾಡಾನೆ ಜಮೀನಿಗೆ ನುಗ್ಗಿದ ವಿಚಾರ ತಿಳಿಯುತ್ತಿದ್ದಂತೆಯೆ ಅರಣ್ಯ ಇಲಾಖೆ ಸಿಬ್ಬಂದಿ, ಪೋಲಿಸರು ಹಾಗೂ ಸುತ್ತ ಮುತ್ತಲ ರೈತರು ಬೆಳಗಿನಿಂದ ಸಂಜೆವರೆಗೂ ಪಟಾಕಿ, ಬೆಚ್ಚುಗುಂಡು ಹಾರಿಸಿ ಎಷ್ಟೇ  ಪ್ರಯತ್ನ ನಡೆಸಿದರೂ ಪ್ರಯೋಜನವಾಗದೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ  ರೈತರನ್ನೇ ಕಾಡಾನೆ ಅಟ್ಟಾಡಿಸಿಕೊಂಡು  ಬಂದಿರುವುದು ಇಲ್ಲಿನವರಲ್ಲಿ ಆತಂಕವನ್ನುಂಟು ಮಾಡಿದೆ.

See also  ಕೋವಿಡ್​ನಿಂದ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್​ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು