News Kannada
Monday, September 26 2022

ಕರ್ನಾಟಕ

ಬಾನಂತಿ ಸಾವು ಪ್ರಕರಣ: ಡಾ. ಶಿವಾನಂದ ಅಮಾನತ್ ಗೆ ಒತ್ತಾಯ - 1 min read

Photo Credit :

ಬಾನಂತಿ ಸಾವು ಪ್ರಕರಣ: ಡಾ. ಶಿವಾನಂದ ಅಮಾನತ್ ಗೆ ಒತ್ತಾಯ

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬಾನಂತಿ ಸಾವಿಗೆ ಡಾ. ಶಿವಾನಂದ ಕುಡ್ತಲಕರ್ ಅವರೇ ಕಾರಣರಾಗಿದ್ದು ತಕ್ಷಣ ಅವರನ್ನು ಅಮಾನತ್ ಮಾಡಬೇಕು ಎಂದು ಒತ್ತಾಯಿಸಿ ಮೃತಳ ಕುಟುಂಬಸ್ಥರ, ವಿವಿಧ ಸಂಘಟನೆಯ ಮುಖಂಡ ಹಾಗೂ ಮೀನುಗಾರರು ನಗರದಲ್ಲಿ ಪ್ರತಿಭಟನೆ ಬೃಹತ್ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಸರ್ವೋದಯ ನಗರದ ಗೀತಾ ಬಾನಾವಳಿ (28) ಇವಳು ಸೆ.3 ರಂದು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು ವೈದ್ಯ ಶಿವಾನಂದ ಕುಡ್ತಲಕರ್ ವಿರುದ್ಧ ನಗರಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ವೈದ್ಯನನ್ನು ಬಂಧಿಸಿರಲಿಲ್ಲ ಎಂದು ಆರೋಪಿಸಿದರು.

ಡಾ. ಶಿವಾನಂದ ವಿರುದ್ಧ ದೂರುಗಳಿವೆ. ಹಣ ಪಡೆದು ಹೆರಿಗೆ ಮಾಡುತ್ತಾರೆ. ಅನಗತ್ಯ ಸಿಜೆರಿನ್ ಮಾಡುತ್ತಾರೆ. ಆಸ್ಪತ್ರೆಯಲ್ಲಿ ದಬ್ಬಾಳಿಕೆ ವಾತಾವರಣ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅ.31 ಕ್ಕೆ ಹೆರಿಗೆಯಾಗಿದ್ದ ಗೀತಾ ಬಾನವಳಿ ಆರೋಗ್ಯವಾಗಿದ್ದರು. ಅವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸೆ.3 ರಂದು ಕರೆದೊಯ್ದು ನಿರ್ಲಕ್ಷ್ಯ ಮಾಡಲಾಗಿದೆ. ಶಸ್ತ್ರಚಿಕಿತ್ಸೆಗೆ ಮುನ್ನ ನಡೆದು ಹೋದ ಮಹಿಳೆ ಶವವಾಗಿ ಹೊರ ಬಂದಿದ್ದಳು. ಇದಕ್ಕೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂದು ಕುಟುಂಬದವರ ಆರೋಪವಾಗಿದೆ. ಈ ಕಾರಣ ವೈದ್ಯನನ್ನು ಬಂಧಿಸಿ. ಅಮಾನತ್ ಮಾಡಿ ಎಂದು ಒತ್ತಾಯಿಸಿದ್ದಾರೆ.

See also  ಮಡಿಕೇರಿ ನಗರಸಭೆ ಬಜೆಟ್ ಮಂಡನೆ ವೇಳೆ ಬಿಜೆಪಿ ಸದಸ್ಯರ ಸಭಾತ್ಯಾಗ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು