News Kannada
Monday, September 26 2022

ಕರ್ನಾಟಕ

ಅಮ್ಮ ಕೊಡವರಿಗೆ ಬೆಂಬಲ ನೀಡಲಿ: ಅಲ್ಲಾರಂಡ ವಿಠಲ್ ಒತ್ತಾಯ - 1 min read

Photo Credit :

ಅಮ್ಮ ಕೊಡವರಿಗೆ ಬೆಂಬಲ ನೀಡಲಿ: ಅಲ್ಲಾರಂಡ ವಿಠಲ್ ಒತ್ತಾಯ

ಮಡಿಕೇರಿ: ‘ಸಂಸ್ಕೃತಿ’ ಎನ್ನುವುದು ಹರಿಯುವ ನೀರಿದ್ದಂತೆ, ಅದರಂತೆ ಮೂಲದಲ್ಲಿ ಪ್ರಕೃತಿಯ ಆರಾಧಕರಾಗಿ ಪ್ರಸ್ತುತ ತಮ್ಮ ಸಂಸ್ಕೃತಿಯಲ್ಲಿ ಪೂಜಾ ಕಾರ್ಯಗಳನ್ನು ಮಿಳಿತಗೊಳಿಸಿಕೊಂಡವರು ಕಾವೇರಿಯ ದುರ್ಘಟನೆಯ ಬಳಿಕ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಲ್ಲಾರಂಡ ರಂಗ ಚಾವಡಿಯ ಪ್ರಮುಖರಾದ ಅಲ್ಲಾರಂಡ ವಿಠಲ ನಂಜಪ್ಪ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿ ಕ್ಷೇತ್ರದಲ್ಲಿ ಅಮ್ಮಕೊಡವರು ಮರಳಿ ಹಕ್ಕನ್ನು ಕೇಳತೊಡಗಿದ್ದಾರೆ. ಅರ್ಚಕ ವೃತ್ತಿ ನಡೆಸುತ್ತಿರುವವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೊಡವ ಸಂಸ್ಕೃತಿ ಉಳಿಸಿ ಬೆಳೆಸಿ ಎಂದು ಹೇಳುವವರು ಇದೀಗ ಅಮ್ಮಕೊಡವರಿಗೆ ಬೆಂಬಲ ನೀಡಬೇಕು ಹಾಗೂ ತಲೆತಲಾಂತರದಿಂದ ಕಾಡನ್ನು ಉಳಿಸಿ ಬೆಳೆಸಿದ ಕಾಡಿನ ಮಕ್ಕಳಾದ ಕುರುಬ, ಜೇನುಕುರುಬ, ಎರವ, ಸೋಲಿಗ ಇತ್ಯಾದಿ ಜನಾಂಗದ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ, ಬೆಳೆಸಲು ಅವಕಾಶ ಕಲ್ಪಿಸಲು ಮತ್ತೆ ಮತ್ತೆ ಧ್ವನಿ ಎತ್ತಬೇಕಾಗಿದೆ. ಕಾಡು ಅವರ ಪೂರ್ವಜರ ಬಳುವಳಿ ಹಕ್ಕು ಕೂಡ ಆಗಿದೆ ಎಂದು ಹೇಳಿದರು.

ತಲಕಾವೇರಿಯಲ್ಲಿ ನಡೆದ ದುರ್ಘಟನೆಯಲ್ಲಿ ಜಾತ್ಯತೀತ ನಿಲುವಿನ ನಾರಾಯಣಾಚಾರ್ ಸೇರಿದಂತೆ ಇತರರ ಸಾವು ನೋವಿನ ವಿಚಾರ. ಈ ಘಟನಾವಳಿಗಳ ಬಳಿಕ ಸ್ಥಳೀಯ ಸಂಸ್ಕೃತಿಯ ವಿಚಾರ ಬರುತ್ತಿದೆ. ಈ ಮೊದಲು ಇದರ ವಿಚಾರಗಳೇಕೆ ಪ್ರಸ್ತಾಪಕ್ಕೆ ಬರಲಿಲ್ಲವೆಂದು ಅಲ್ಲಾರಂಡ ವಿಠಲ ಪ್ರಶ್ನಿಸಿದರು.

ಕೊಡವರ ಮೂಲ ಸಂಸ್ಕೃತಿಯಲ್ಲಿ ಪೂಜಾ ಕಾರ್ಯಗಳು ಇರಲಿಲ್ಲವಾದರು, ನಂತರದ ದಿನಗಳಲ್ಲಿ ಅದು ಸೇರ್ಪಡೆಗೊಂಡಿದೆ. ಮೂಲ ಕೊಡವ ಸಂಸ್ಕೃತಿಯಲ್ಲಿ ಧಾರ್ಮಿಕ ಪೂಜೆಗಳು ಇರಲಿಲ್ಲ, ಗೃಹಪ್ರವೇಶದಂತಹ ಆಚರಣೆಯನ್ನು  ‘ಮನೆ ಮಂಗಲ’ವೆಂದು ವಿಭಿನ್ನವಾಗಿ ಆಚರಿಸಲಾಗುತಿತ್ತು. ಪ್ರಕೃತಿಯ ಆರಾಧಕ ಕೊಡವ ಸಮುದಾಯದಲ್ಲಿ ಮಕ್ಕಳಿಗೆ ಹೆಸರಿಡಲು ಪಂಚಾಂಗದ ಅಗತ್ಯತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಪಿಂಡ ಪ್ರದಾನದ ಆಚರಣೆಗಳು ಕೊಡವ ಸಂಸ್ಕೃತಿಯಲ್ಲಿ ಇಲ್ಲವೆಂದು ಹೇಳಿದರು.

ಇದೀಗ ಅಮ್ಮ ಕೊಡವರು ತಲಕಾವೇರಿಯಲ್ಲಿ ಪೂಜಾ ಹಕ್ಕುದಾರಿಕೆಯ ಬೇಡಿಕೆ ಇಟ್ಟಿದ್ದಾರೆ, ಅದರ ಚರ್ಚೆಗಳು ನಡೆಯುತ್ತಿದೆ. ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಎನ್ನುವವರು ಅಮ್ಮ ಕೊಡವರನ್ನು ಬೆಂಬಲಿಸುವುದರೊಂದಿಗೆ, ಇಲ್ಲಿನ ಅರಣ್ಯ ಸಂಪತ್ತನ್ನು ಸಂರಕ್ಷಿಸಿದ ಜನಾಂಗಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದು ತಿಳಿಸಿದರು.

ಅಮ್ಮ ಕೊಡವರು ತಲಕಾವೇರಿಯಲ್ಲಿ ಪೂಜೆಯ ಹಕ್ಕುದಾರಿಕೆಗೆ ಬೇಡಿಕೆ ಮಂಡಿಸಿದ್ದು, ಇದಕ್ಕೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಾ. ಮಹಾಬಲೇಶ್ವರ ಭಟ್ಟರು,  ಇದು ಸರಿಯಾದ ಕ್ರಮವಲ್ಲ ಎಂದು  ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದಂತೆ 300 ವರ್ಷಗಳ ಹಿಂದೆ ಕುಲಧರ್ಮ, ಧರ್ಮ ಎರಡನ್ನೂ ತ್ಯಜಿಸಿ ತಲಕಾವೇರಿಯಲ್ಲಿ ಬ್ರಾಹ್ಮಣರಿಗೆ ಪೂಜೆ ಮಾಡಲು ಅಮ್ಮ ಕೊಡವರು ಅವಕಾಶ ಕಲ್ಪಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವೆಂದು ವಿಠಲ ಸ್ಪಷ್ಟಪಡಿಸಿದರು.

ಹಾಲೇರಿ ರಾಜರೊಬ್ಬರ ಕಾಲದಲ್ಲಿ ಸಮಯ ಸಂದರ್ಭಕ್ಕೆ ಸರಿಯಾಗಿ ತೀರ್ಥ ಪ್ರಸಾದ ತಲುಪಿಸಲು ವಿಳಂಬವಾದ ಕಾರಣದಿಂದ ಅಮ್ಮ ಕೊಡವರ ಹಕ್ಕಿನ ಪೂಜಾ ವೃತ್ತಿಯನ್ನು ವಜಾಗೊಳಿಸಿ ಆ ಸ್ಥಾನಕ್ಕೆ ಬ್ರಾಹ್ಮಣರನ್ನು ನೇಮಿಸಿದ ಬಗ್ಗೆ ಮಾಹಿತಿ ಇದೆ ಎಂದು ಅವರು ತಿಳಿಸಿದರು.

See also  ರೈತರ ಸಾಲ ಮನ್ನಾ ಮಾಡುತ್ತೇನೆಂದು ಮಗನ ಆಣೆ ಮಾಡಿದ ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು