News Kannada
Thursday, October 06 2022

ಕರ್ನಾಟಕ

ಕೊಡವ ಯುವತಿಯರ ಅಂತರ್ಜಾತಿ ವಿವಾಹಕ್ಕೆ ಕಡಿವಾಣ ಹಾಕಲು ಮುಂದಾದ ಕೊಡವ ಸಮಾಜ - 1 min read

Photo Credit :

ಕೊಡವ ಯುವತಿಯರ ಅಂತರ್ಜಾತಿ ವಿವಾಹಕ್ಕೆ ಕಡಿವಾಣ ಹಾಕಲು ಮುಂದಾದ ಕೊಡವ ಸಮಾಜ

ಮಡಿಕೇರಿ: ಆಧುನೀಕತೆಯ ಮತ್ತು ಪಾಶ್ಚಿಮಾತ್ಯ ಶೈಲಿಯ ಅನುಕರಣೆಯ ಕಾರಣದಿಂದಾಗಿ ಇಂದು ಸಮಾಜದಲ್ಲಿ ಅಂತರ್ಜಾತೀಯ ವಿವಾಹಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ನಮ್ಮ ಸಮಾಜದಲ್ಲಿ ಈಗಲೂ ಜೀವಂತವಾಗಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅಂತರ್ಜಾತೀಯ ವಿವಾಹಗಳೇ ಸೂಕ್ತ ಮದ್ದಾಗಿದೆ. ಆದರೆ ಈ ಅಂತರ್ಜಾತೀಯ ವಿವಾಹದಿಂದಾಗಿ ಕೆಲವೊಂದು ಸಣ್ಣ ಸಮುದಾಯಗಳಿಗೆ ಗಂಡು ಮತ್ತು ಹೆಣ್ಣು ಸಿಗುವುದೇ ಕಷ್ಟವಾಗಿದೆ.

ಉತ್ತರ ಕನ್ನಡದ ಹವ್ಯಕ ಸಮುದಾಯದ ವರರಿಗೆ ಸ್ವಜಾತೀಯ ವಧುಗಳು ಸಿಗುವುದೇ ದುರ್ಲಭವಾಗಿದೆ. ಇತ್ತೀಚೆಗೆ ರಾಜ್ಯದ ಪುಟ್ಟ ಜಿಲ್ಲೆ ವಿಶಿಷ್ಟ ಸಂಸ್ಖೃತಿಯ ಕೊಡಗಿನಲ್ಲೂ ಕೊಡವ ಜನಾಂಗದಲ್ಲಿ ಯುವತಿಯರ ಕೊರತೆ ಕಂಡು ಬರುತ್ತಿದೆ. ಈ ಅಸಮತೋಲನಕ್ಕೆ ಕಡಿವಾಣ ಹಾಕಲು ಕೊಡವ ಮುಖಂಡರು ಮುಂದಾಗಿದ್ದಾರೆ. ಇದಕ್ಕೆ ನಾಂದಿಯಾಗಿ ದಕ್ಷಿಣ ಕೊಡಗಿನ ಬಾಳೆಲೆ ಕೊಡವ ಸಮಾಜವು ಕೊಡವ ಯುವತಿಯರು ಅಂತರ್ಜಾತಿ ಯುವಕನನ್ನು ಮದುವೆ ಆಗುವುದಾದರೆ ಕಲ್ಯಾಣ ಮಂಟಪ ಬಾಡಿಗೆಗೆ ನೀಡದಿರಲು ತೀರ್ಮಾನಿಸಿದೆ. ಅಲ್ಲದೆ ಅಂತಹಾ ಯುವಕ ಕೊಡವರ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ತೊಟ್ಟು ವಿವಾಹದಲ್ಲಿ ಸಂಭ್ರಮಿಸುವಂತಿಲ್ಲ, ’ಗೆಜ್ಜೆತಂಡ್’ನ್ನು ಹಿಡಿಯುವಂತಿಲ್ಲ ಎಂದು ಬಾಳೆಲೆ ಕೊಡವ ಸಮಾಜದಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.

ಕೊಡವ ಸಮಾಜ ಅಧ್ಯಕ್ಷ ಮಲಚೀರ ಬೋಸ್ ಚಿಟ್ಟಿಯಪ್ಪ ಅವರು, ಇನ್ನು ಮುಂದೆ ಕೊಡವ ಯುವತಿಯರು ಅಂತರ್‌ಜಾತಿಯ ಮದುವೆಯಾದಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆಯಾದ ಕುಪ್ಯ ಚೇಲೆ, ಪೀಚೆಕತ್ತಿ, ಮಂಡೆತುಣಿ ಮತ್ತು ಕೊಡವ ಮದುಮಗ ಮದುವೆಯಲ್ಲಿ ಹಿಡಿಯುವ ಗೆಜ್ಜೆತಂಡ್ ಅನ್ನು ಅನ್ಯ ಜಾತಿಯ ಹುಡುಗರಿಗೆ ತೊಡಿಸಿ ವೈಭವೀಕರಿಸುವಂತಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಈ ವರದಿಗಾರ ಯುನೈಟೆಡ್‌ ಕೊಡವ ಆರ್ಗನೈಸೇಷನ್‌ ಅಧ್ಯಕ್ಷ ಮಂಜು ಚಿಣ್ಣಪ್ಪ ಅವರನ್ನು ಮಾತಾಡಿಸಿದಾಗ, 18 ಮೀರಿದ ಯುವಕ ಯುವತಿಯರು ನಮ್ಮ ಸಂವಿಧಾನದ ಪ್ರಕಾರ ಅವರಿಗಿಷ್ಟ ಬಂದವರನ್ನು ಮದುವೆ ಅಗುವ ಹಕ್ಕು ಹೊಂದಿದ್ದಾರೆ. ಆದರೆ ಕೊಡವ ಸಮುದಾಯದಲ್ಲಿ ಇಂದು ಯುವತಿಯರು ಅನ್ಯ ಜಾತಿಯವರನ್ನು ಮದುವೆ ಆಗುತ್ತಿರುವುದಕ್ಕೆ ಸಂಸ್ಕೃತಿ , ಸಂಸ್ಕಾರಗಳ ಅರಿವಿಲ್ಲದಿರುವುದೇ ಆಗಿದೆ ಎಂದರು. ಒಂದು ವೇಳೆ ಆ ರೀತಿ ಮದುವೆ ಆಗುವುದಾದರೆ ಅವರು ಮದುವೆ ಮಾಡಿಕೊಂಡು ಹೋಗಲಿ, ತಮ್ಮ ಗಂಡನ ಮನೆ ಬೆಳಗಲಿ, ಆದರೆ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟು ಮಾಡಿ ಹೋಗುವುದಕ್ಕೆ ತಮ್ಮ ತೀವ್ರ ವಿರೋಧ ಇದೆ ಎಂದರು.

ಯಾವುದೋ ಜನಾಂಗದ ಯುವಕರು ಕೊಡವ ಪರಂಪರೆಯ ಸಂಪ್ರದಾಯಿಕ ಹೆಮ್ಮೆಯ ಗುರುತಾದ ವೇ಼ಷ ಭೂಷಣ ಧರಿಸುವುದನ್ನು ಒಪ್ಪಲಾಗದು ಎಂದರು.

ಇಂದು ಕೊಡವ ಜನಾಂಗದ ಯುವತಿಯರು ಉನ್ನತ ಶಿಕ್ಷಣ ಪಡೆಯುತಿದ್ದು ಮಹಾನಗರಗಳಲ್ಲಿ ಉನ್ನತ ಸಂಬಳ ಪಡೆಯುವ ಹುದ್ದೆಯಲ್ಲಿದ್ದಾರೆ. ಅವರು ಸಹಜವಾಗೇ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಸೂಕ್ತ ವರನನ್ನು ಪ್ರೇಮ ವಿವಾಹ ಆಗುತಿದ್ದಾರೆ. ಕೊಡಗಿನಲ್ಲಿ ಇಂದು ಉದ್ಯೋಗ ನಿಮಿತ್ತ ಯುವಕ ಯುವತಿಯರು ಬೆಂಗಳುರಿನ ಹಾದಿ ಹಿಡಿದಿದ್ದಾರೆ. ಇದು ಬದುಕಿನ ಅನಿವಾರ್ಯತೆ ಕೂಡ. ಆದರೆ ಈ ರೀತಿ ಅಂತರ್ಜಾತಿ ವಿವಾಹ ಆಗುತ್ತಿರುವುದರಿಂದ ಇಂದು ಕೊಡವ ಯುವಕರು ವಧುಗಳ ಕೊರತೆಯನ್ನು ಎದುರಿಸುತಿದ್ದಾರೆ.

See also  ಹೊನ್ನಾವರದಲ್ಲಿ 24ಗಂಟೆ ನಿಷೇಧಾಜ್ಞೆ: ಶಾಲಾ ಬಾಲಕಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು

ಕೆಲವೊಂದು ಸಂದರ್ಭಗಳಲ್ಲಿ ಯುವಕ ಯುವತಿ ಇಬ್ಬರೂ ಶ್ರೀಮಂತರೇ ಆಗಿರುತ್ತಾರೆ. ಆದರೆ ಯುವಕ ಅಥವಾ ಯುವತಿ ಇತ್ತೀಚೆಗೆ ಶ್ರೀಮಂತರಾಗಿದ್ದು ಅವರ ಕುಟುಂಬದವರೆಲ್ಲರೂ ಮಧ್ಯಮ ವರ್ಗದವರಾಗಿದ್ದು ಸಣ್ಣ ಉದ್ಯೋಗದಲ್ಲಿರುತ್ತಾರೆ . ಅಂತಹ ಸಂದರ್ಭದಲ್ಲಿ ಕುಟುಂಬ ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಮದುವೆ ಆಗುವುದಿಲ್ಲ.

ಇದೀಗ ಬಾಳೆಲೆ ಕೊಡವ ಸಮಾಜವು ಮಾಡಿರುವ ತೀರ್ಮಾನವನ್ನೇ ಉಳಿದ 35 ಕೊಡವ ಸಮಾಜಗಳೂ ಅನುಸರಿಸುವ ಸಾಧ್ಯತೆ ಇದೆ. ಕಳೆದ ವರ್ಷ ಬಾಳೆಲೆ ಕೊಡವ ಸಮಾಜ ಮದುವೆಯ ಹಿಂದಿನ ದಿನದ ಗಂಗೆ ಪೂಜೆಯ ಸಂದರ್ಭದಲ್ಲಿ ಮದ್ಯ ಸೇವನೆಯನ್ನು ನಿಷೇಧಿಸಿತ್ತು. ನಂತರ ಅನೇಕ ಸಮಾಜಗಳು ಮದ್ಯ ಸೇವನೆಯನ್ನು ನಿಷೇಧಿಸಿದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು