News Kannada
Friday, September 30 2022

ಕರ್ನಾಟಕ

ದ್ವಿಚಕ್ರ ವಾಹನಗಳ ಕಳ್ಳತನ: ಬೈಕ್‍ಗಳ ಸಹಿತ ಇಬ್ಬರು ಅಪ್ರಾಪ್ತ ಬಾಲಕರ ವಶ - 1 min read

Photo Credit :

ದ್ವಿಚಕ್ರ ವಾಹನಗಳ ಕಳ್ಳತನ: ಬೈಕ್‍ಗಳ ಸಹಿತ ಇಬ್ಬರು ಅಪ್ರಾಪ್ತ ಬಾಲಕರ ವಶ

ಮಡಿಕೇರಿ: ಕೊಡಗು ಜಿಲ್ಲೆ, ಹೊರ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಬೈಕ್ ಕಳವು ಮಾಡಿದ ಆರೋಪದಡಿ ಇಬ್ಬರು ಅಪ್ರಾಪ್ತ ಬಾಲಕರನ್ನು ಕೊಡಗು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ, ಐದು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಇಬ್ಬರು ಬಾಲಕರನ್ನು ಬಾಲ ಅಪರಾಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ನಗರ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ಪ್ರವಾಸಿ ಮಂದಿರದ ಪಾರ್ಕಿಂಗ್ ಸ್ಥಳದಲ್ಲಿ ಅ.30ರಂದು ಸಿ.ಆರ್.ತಿಮ್ಮಯ್ಯ ಎಂಬವರು ನಿಲ್ಲಿಸಿದ್ದ ಟಿವಿಎಸ್ ಅಪಾಚೆ ಮೋಟಾರ್ ಬೈಕ್ ಕಳವಾಗಿದ್ದು, ಈ ಬಗ್ಗೆ ತಿಮ್ಮಯ್ಯ ಅವರು ಮಡಿಕೇರಿ ನಗರ ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಡಿವೈಎಸ್‍ಪಿ ಬಿ.ಪಿ.ದಿನೇಶ್ ಕುಮಾರ್, ಸಿಐ ಅನೂಪ್ ಮಾದಪ್ಪ ನೇತೃತ್ವದಲ್ಲಿ ರಚಿಸಿದ್ದ ತನಿಖಾ ತಂಡ ಇದೀಗ ಕಳವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ತನಿಖಾ ತಂಡವು ಕಳವು ನಡೆಸಿದ ಬಾಲಕರನ್ನು ಪತ್ತೆ ಹಚ್ಚಿ ಅವರು ಮಡಿಕೇರಿಯಲ್ಲಿ ಕಳವು ಮಾಡಿದ್ದ ಟಿವಿಎಸ್ ಅಪಾಚೆ ಮೋಟಾರು ಬೈಕ್ ಸೇರಿದಂತೆ ಬೆಂಗಳೂರು ಹಾಗೂ ಮಂಡ್ಯ ನಗರದಲ್ಲಿ ಮತ್ತು  ಕೇರಳದ ಕಣ್ಣೂರಿನಲ್ಲಿ ಕಳುವು ಮಾಡಿದ್ದ ಒಟ್ಟು 5 ವಿವಿಧ ಕಂಪೆನಿಯ ಮೋಟಾರು ಬೈಕುಗಳನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಬೈಕ್‍ಗಳ ಅಂದಾಜು ಮೌಲ್ಯ 2.25ಲಕ್ಷ ರೂ.ಗಳಾಗಿದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಸಹಾಯಕ ಉಪ ನಿರೀಕ್ಷಕರಾದ  ಗೋವಿಂದ ರಾಜು,  ಹೊನ್ನಪ್ಪ ಕೆ.ಜಿ.,  ಮೊಹಮ್ಮದ್, ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಶ್ರೀನಿವಾಸ, ಪ್ರವೀಣ್ ಬಿ.ಕೆ.,  ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್ ಬಿ.ಜಿ,  ನಂದಕುಮಾರ್,  ಎ.ಆರ್, ಮನು,  ಭವಾನಿ ಪಾಲ್ಗೊಂಡಿದ್ದರು.

ಸಾರ್ವಜನಿಕರಿಗೆ ಸೂಚನೆ

ಆಪಾದಿತರು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಯಾವುದೇ ದ್ವಿಚಕ್ರ ವಾಹನದ ಲಾಕನ್ನು ತಮ್ಮಲ್ಲಿರುವ ಡೂಪ್ಲಿಕೇಟ್ ಮಾಸ್ಟರ್ ಕೀ ಸಹಾಯದಿಂದ ತೆಗೆದು ಕಳ್ಳತನ ಮಾಡುವುದರಲ್ಲಿ ನಿಪುಣರಾಗಿರುತ್ತಾರೆ. ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

See also  ಅಕ್ರಮ ಪ್ರವೇಶ ಮಾಡದಂತೆ ಕಾಡಿನ ದಾರಿಯಲ್ಲಿ ಕಂದಕ ತೆಗೆದ ಗೋವಾ ಸರಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು