News Kannada
Friday, October 07 2022

ಕರ್ನಾಟಕ

ಮಂಡ್ಯ: ಗುಡ್ಡ ಪ್ರದೇಶದಲ್ಲಿ ಆರು ಚಿರತೆಗಳು ಪ್ರತ್ಯಕ್ಷ, ಜನರಲ್ಲಿ ಆತಂಕ - 1 min read

Photo Credit :

ಮಂಡ್ಯ: ಗುಡ್ಡ ಪ್ರದೇಶದಲ್ಲಿ ಆರು ಚಿರತೆಗಳು ಪ್ರತ್ಯಕ್ಷ, ಜನರಲ್ಲಿ ಆತಂಕ

ಮಂಡ್ಯ ;  ಇಲ್ಲಿಗೆ ಸಮೀಪದ  ಮೇಲುಕೋಟೆಯ  ಗುಡ್ಡ ಪ್ರದೇಶದಲ್ಲಿ  ಆರು ಚಿರತೆಗಳು ಸುತ್ತಾಡುತಿದ್ದು    ಸ್ಥಳೀಯರು  ಹಾಗೂ ರೈತರು  ಆತಂಕಕ್ಕೀಡಾಗಿದ್ದಾರೆ. 

ಕಳೆದ  ಕೆಲವು  ವಾರದಿಂದ ಕಾಣಿಸಿಕೊಳ್ಳುತ್ತಿರುವ ಚಿರತೆಗಳು  ಗ್ರಾಮದಲ್ಲಿ ರಾತ್ರಿ ಹೊತ್ತು ನಾಯಿಗಳನ್ನು  ಹೊತ್ತೊಯ್ಯುತ್ತಿವೆ.   ಕೋಳಿಗಳ ಮೇಲೆ ನಿರಂತರವಾಗಿ ದಾಳಿಮಾಡಿ ತಿಂದು ಹಾಕುತ್ತಿವೆ.

ಹೊಗರಮ್ಮನಬೆಟ್ಟ, ಜೇನುಕಲ್ಲು, ಪಲಾಷತೀರ್ಥ ಸೇರಿದಂತೆ ೮ ಕಿ.ಮೀ. ವ್ಯಾಪ್ತಿಯ ಹಲವೆಡೆ ಇವು  ಸುತ್ತಾಡುತ್ತಿದ್ದು  ೪-೫ ಕರುಗಳನ್ನೂ ಕೊಂದು ಹಾಕಿವೆ. ಈ ಕುರಿತು ಮೇಲು ಕೋಟೆ ವಲಯ ಅರಣ್ಯಾಧಿಕಾರಿಗೆ ದೂರು ನೀಡಿರುವ ಗ್ರಾಮಸ್ಥರು  ಕೂಡಲೇ ಚಿರತೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸುವಂತೆ ಒತ್ತಾಯಿಸಿದ್ದಾರೆ. 

 

ಕಳೆದ ವಾರ ಮೇಲುಕೋಟೆ ಬಸ್ ನಿಲ್ದಾಣದ ಬಳಿ ಬಂದು ನಾಯಿಯನ್ನು ಬೇಟೆಯಾಡಿ ಕೊಂದು ಸಾಗಿಸಿದೆ. ಚಿರತೆಗಳಿಗೆ ಆಹಾರ  ಕೊರತೆಯಾದರೆ  ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಯಿದ್ದು, ಚಿರತೆಗಳನ್ನು ಹಿಡಿದು ದಟ್ಟಕಾಡಿಗೆ ಬಿಡಿ ಎಂದು ಕೋರಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಹೆಚ್ಚಿನ ಅಪಾಯ ಆಗುವ ಮುನ್ನ ಚಿರತೆಗಳನ್ನು ಹಿಡಿದು ಕಾಡಿಗೆ ಬಿಡಬೇಕೆಂದು  ಒತ್ತಾಯಿಸಿರುವ ಗ್ರಾಮಸ್ಥರು  . ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಅನಿವಾರ್ಯ ಎಂದು   ಎಚ್ಚರಿಸಿದ್ದಾರೆ.

See also  ಸರಕು ಲಾರಿ ಮಗುಚಿ ಬಿದ್ದು ಸಂಚಾರ ಅಸ್ತವ್ಯಸ್ತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು