News Kannada
Sunday, September 25 2022

ಕರ್ನಾಟಕ

ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತರ ಪ್ರತಿಭಟನೆ - 1 min read

Photo Credit :

ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತರ ಪ್ರತಿಭಟನೆ

ಕೆ.ಆರ್.ಪೇಟೆ: ರೈತರ ಬಹು ಅಗತ್ಯವಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ತಾಲೂಕು ರೈತಸಂಘದ ಕಾರ್ಯಕರ್ತರು ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಮತ್ತು ತಾಲೂಕು ಆಡಳಿತದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಧಿಕ್ಕಾರ ಕೂಗಿದರು.

ರೈತರ ಬಹುಮುಖ್ಯ ಬೇಡಿಕೆಗಳಾದ ಕಬ್ಬಿನ ಬೆಲೆ ಹೆಚ್ಚಿಸಬೇಕು, ಕನಿಷ್ಠ ಐದು ಗುಂಟೆ ಮೇಲಿನ ಭೂಮಿಯನ್ನು ಮಾತ್ರ ನೋಂದಣಿ ಮಾಡಬೇಕೆಂಬ ರಾಜ್ಯ ಸರ್ಕಾರದ ನೀತಿ ರದ್ದಾಗಬೇಕು, ತಿದ್ದುಪಡಿಯಾಗಿರುವ ಭೂ ಸುಧಾರಣಾ ಕಾಯ್ದೆ ಮತ್ತು ಎ.ಪಿ.ಎಂ.ಸಿ ಕಾಯ್ದೆಗಳನ್ನು ಕೈಬಿಡಬೇಕು. ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ರೈತರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು ಮತ್ತು ತಾಲೂಕು ಕಚೇರಿಯಲ್ಲಿನ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ತಡೆಗೆ ತಹಶೀಲ್ದಾರ್ ಕ್ರಮಕೈಗೊಳ್ಳಬೇಕು ಎಂಬುದು ರೈತರ ವಿವಿಧ ಬೇಡಿಕೆಗಳಾಗಿದ್ದವು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳು ರೈತರಿಗೆ ಮಾರಕವಾಗಿದ್ದು. ರೈತ ಸಮುದಾಯಕ್ಕೆ ಧಕ್ಕೆತರುವಂತಿವೆ. ಆದರೂ ಎಲ್ಲೆಡೆ ವ್ಯಾಪಕ ಟೀಕೆ, ಮುಷ್ಕರಗಳು ನಡೆದರೂ ರೈತರ ಬಗ್ಗೆ ಚಕಾರ ಎತ್ತದ ರಾಜ್ಯ ಸರ್ಕಾರ ಕೇವಲ ಹೊಣೆಗೇಡಿತನ ಪ್ರದರ್ಶಿಸುತ್ತಿದೆ, ಪ್ರತಿವರ್ಷ ಎಲ್ಲ ವಸ್ತುಗಳ ಬೆಲೆ ಏರುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನವೂ ಕಾಲಕಾಲಕ್ಕೆ ಹೆಚ್ಚಳವಾಗುತ್ತಿದೆ. ಆದರೆ ರೈತರ ಕೃಷಿ ಉತ್ಪನ್ನಗಳ ಬೆಲೆ ಮಾತ್ರ ಹೆಚ್ಚಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಕಬ್ಬಿನ ಬೆಲೆ ಹೆಚ್ಚಿಸಿಲ್ಲ. ಕಾರ್ಖಾನೆಗಳ ಅಭಿವೃದ್ದಿ ಹೆಸರಿನಲ್ಲಿ ರಾಜ್ಯದಾದ್ಯಂತ 38 ಸಾವಿರಕ್ಕೂ ಅಧಿಕ ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಹೆಸರಿನಲ್ಲಿ ಕಿತ್ತುಕೊಳ್ಳಲಾಗಿದೆ. ಕೆ.ಆರ್.ಪೇಟೆ ತಾಲೂಕಿನ ಬಣ್ಣೇನಹಳ್ಳಿಯ ಬಳಿ 350 ಕ್ಕೂ ಎಕರೆ ಕೃಷಿ ಭೂಮಿಯನ್ನು ಫುಡ್ ಪಾರ್ಕ್ ಹೆಸರಿನಲ್ಲಿ ಆದರೆ ಅಲ್ಲಿ ಇದುವರೆಗೂ ಫುಡ್ ಪಾರ್ಕ್ ನಿರ್ಮಾಣವಾಗಿಲ್ಲ. ಫುಡ್ ಪಾರ್ಕ್ ಹೆಸರಿನಲ್ಲಿ ರೈತರಿಗೆ ಮೋಸ  ಮಾಡಲಾಗಿದೆ. ರೈತರ ಭೂಮಿಯನ್ನು ಕಿತ್ತು ಉದ್ಯಮದ ಹೆಸರಿನಲ್ಲಿ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ನಾಗೇಂದ್ರ ಆರೋಪಿಸಿದರು.

ತಾಲೂಕಿನ ವಿವಿಧ ಮೂಲೆಗಳಿಂದ ತಾಲೂಕು ಕಚೇರಿಗೆ ಬರುವ ರೈತರಿಗೆ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಆದರೆ ಇಲ್ಲಿನ ತಹಶೀಲ್ದಾರ್ ರೈತರ ವಾಹನಗಳಿಗೆ ಪಾರ್ಕಿಂಗ್ ವಸೂಲಿ ಮಾಡುತ್ತಿದ್ದಾರೆ. ಸರ್ಕಾರಿ ಜಾಗ ಇವರ ಸ್ವತ್ತು ಎಂದು ತಿಳಿದುಕೊಂಡಿದ್ದಾರೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಅಧಿಕಾರಿಯೇ ಹೀಗಾದರೆ ಉಳಿದವರ ಪಾಡೇನು?. ಮರಳು, ಗಣಿಗಾರಿಕೆ, ಮುಂತಾದ ವಿಷಯಗಳಲ್ಲಿ ತಹಶೀಲ್ದಾರರ ರೈತ ವಿರೋಧಿ ನೀತಿಗಳು ತಕ್ಷಣವೇ ನಿಲ್ಲಬೇಕೆಂದು ಒತ್ತಾಯಿಸಿದರು.

See also  ಸಿದ್ದರಾಮಯ್ಯನವರಿಗೆ ತಲೆಕೆಟ್ಟಿದೆ: ಸಚಿವ ಈಶ್ವರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು