ಮಡಿಕೇರಿ: ಭಾರತಿಯ ಜನತಾ ಪಾರ್ಟಿ ಎಸ್. ಸಿ ಮೋರ್ಚಾ ವತಿಯಿಂದ ನೀರುಕೊಲ್ಲಿಯಲ್ಲಿ ಸಂವಿಧಾನ ದಿನವನ್ನು ಸರಳವಾಗಿ ಆಚರಿಸಲಾಯಿತು.
ಮಡಿಕೇರಿ ಗ್ರಾಮಾಂತರದಲ್ಲಿ ನಡೆದ ಸಂವಿಧಾನ ದಿನವನ್ನು ಎಸ್. ಸಿ ಮೋರ್ಚಾದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಯೋಗೆಶ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗೆ ಪುಷ್ಪಾ ನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ತನ್ನ ಯೌವನದಲ್ಲಿ ಶಿಕ್ಷಣ, ಸಮಾನತೆಯಿಂದ ದೂರವಾದ ಬಾಲಕ ಕರಡು ಪ್ರತಿಯನ್ನು ತಯಾರಿಸಿ ದೇಶಕ್ಕೆ ಸಮಾನತೆ ತರುವಂತಹ ಸಂವಿಧಾನವನ್ನು ಸಮಾರ್ಪಿಸಿದ ಹೆಗ್ಗಳಿಕೆಗೆ ಪಾತ್ರರಾದರು ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖ ಪಿ.ಪಿ ಶ್ರೀಧರ್, ಬಿ.ಕೆ ಕಿರಣ್, ತನಿಯಪ್ಪ, ಎಚ್.ಟಿ ರಾಮ್, ಜನಾರ್ಧನ್, ಗಂಗಾಧರ್, ಚಂದ್ರ, ಮೋಟಯ್ಯ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದರು.