ಸೋಮವಾರಪೇಟೆ: ಸರ್ವೆ ಕಾರ್ಯ ನಡೆಸಲು 25 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಸರಕಾರಿ ಭೂಮಾಪಕ ಎಸಿಬಿ ಬಲೆಗೆ ಬಿದ್ದಿರುವ ಘಟನೆಯು ಇಲ್ಲಿ ನಡೆದಿದೆ.
ಹಣ ನೀಡಿದರೆ ಮಾತ್ರ ಕಡತವನ್ನು ವಿಲೇ ಮಾಡುವುದಾಗಿ ಸರ್ವೇಯರ್ ದಿಲೀಪ್ ಕುಮಾರ್ ತಿಳಿಸಿದರು ಎಂದು ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ಮಾಡಿದೆ.
ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಸರ್ವೆ ನಂಬರ್ 119/5 ರ 13.33 ಎಕರೆ ವಿಸ್ತೀರ್ಣದ ಕಾಫಿ ಮತ್ತು ಒಣಮೆಣಸು ತೋಟದ ಸರ್ವೇ ಕಾರ್ಯ ನಡೆಸಲು ಲಂಚ ಕೊಡುವಂತೆ ಒತ್ತಾಯಿಸಿದ ಹಗರಣದಲ್ಲಿ ದಿಲೀಪ್ ಕುಮಾರ್ ಅವರನ್ನು ಎಸಿಬಿ ವಶಕ್ಕೆ ಪಡೆದಿದೆ.
ಮೂಲಗಳ ಪ್ರಕಾರ, ಲಂಚ ನೀಡಲು ಇಚ್ಛೆ ಇಲ್ಲದ ಕೊಡಗು ಸೇವಾ ಕೇಂದ್ರ ಮಡಿಕೇರಿ ಸಂಚಾಲಕ ತೇಲಪಂಡ ಸೋಮಯ್ಯ ಅವರಿಂದ 20,000 ರೂಪಾಯಿ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿ ದಿಲೀಪ್ ಕುಮಾರ್ ನ್ನು ಎಸಿಬಿ ಸಾಕ್ಷಿ ಸಮೇತ ಬಂಧಿಸಿದೆ.