ವಿಜಯಪುರ: ಇಂದು ಕರ್ನಾಟಕ ಬಂದ್ ಮಾಡಬೇಕೆಂದು ಹಲವಾರು ಸಂಘಟನೆಗಳು ಪ್ರಯತ್ನಪಟ್ಟರು ಕೆಲವೆಡೆ ಅದು ಸಾಧ್ಯವಾಗಿಲ್ಲ. ಕರ್ನಾಟಕದ ಹಲವೆಡೆ ಎಂದಿನಂತೆ ವ್ಯಾಪಾರ-ವಹಿವಾಟು, ವಾಹನ ಸಂಚಾರಗಳು ನಡೆದಿದ್ದವು. ಅಂಗಡಿಗಳು, ಮಳಿಗೆಗಳು ತೆರೆದಿದ್ದವು.
ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಆಯೋಜಿಸಿದ್ದ ಭದ್ರತಾ ಕ್ರಮಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಅದರೊಂದಿಗೆ ವಿಜಯಪುರದಲ್ಲಿ ಕನ್ನಡ ಸಂಘಟನೆಗಳು ಹೇಗೆ ಬಂದ್ ನಡೆಸುತ್ತಾರೆ ನೋಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದಮ್ಕಿ ಹಾಕಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಮತ್ತು ಪ್ರವೀಣ್ ಶೆಟ್ಟಿ ಗುಂಪಿನ ಕಾರ್ಯಕರ್ತರು ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್ಯಾಲಿ ನಡೆಸಿ ಪ್ರತಿಭಟನೆ ಮಾಡಿದರು. ಅವರು ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ನಿಗಮವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು