ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನ ಮೇಲೆ ಡಿ.೩ರಂದು ನಡೆದ ಹಲ್ಲೆ ಪ್ರಕರಣದ ಹಿನ್ನಲೆಯಲ್ಲಿ ಬುಗಿಲೆದ್ದ ಗಲಭೆ ಘಟನೆಗಳು ಮುಗಿಯುವ ಹಾಗೆ ಕಾಣುತ್ತಿಲ್ಲ. ಶಿವಮೊಗ್ಗದ ಬೀಬಿ ಸ್ಟ್ರೀಟ್ ನ ಲಾಲ್ ಬಂದ್ ಕೇರಿ ಹಾಗೂ ರಾಮಣ್ಣ ಶ್ರೇಷ್ಠಿ ಪಾರ್ಕ್ ರಸ್ತೆಯಲ್ಲಿ ನಲ್ಲಿ ಎರಡು ದ್ವಿಚಕ್ರವಾಹನಗಳನ್ನ ಸುಟ್ಟು ಹಾಕಲಾಗಿದೆ.
ಲಾಲ್ ಬಂದ್ ಕೇರಿಯ ಮನೆಯ ಮುಂದೆ ನಿಲ್ಲಿಸಿದ್ದ ಬಜಾಜ್ ಡಿಸ್ಕವರ್ ದ್ವಿಚಕ್ರವಾಹನವಾದ ಕೆಎ14 ಇಸಿ 9376 ಕ್ರಮ ಸಂಖ್ಯೆ ದ್ವಿಚಕ್ರವಾಹನವನ್ನ ನಿನ್ನೆ ರಾತ್ರಿ ದುಷ್ಕರ್ಮಿಗಳು ಸುಟ್ಟುಹಾಕಿದ್ದು, ಕರಕಲಾದ ವಾಹನವನ್ನ ದೊಡ್ಡಪೇಟೆ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಇನ್ನೊಂದು ವಾಹನವನ್ನ ಸುಟ್ಟು ಹಾಕಲಿದೆ. ಸಯ್ಯದ್ ಮೀರ್ ಮೆಮೂದ್ ಎಂಬ ಮೆಕನಿಕ್ ರವರ ಬೈಕ್ ಸುಡಲಾಗಿದೆ. ಮೆಮೂದ್ ಅವರ ತಾಯಿ ಆಕಸ್ಮಿಕವಾಗಿ ನಿದ್ದೆಯಿಂದ ಎಚ್ಚರಗೊಂಡಾಗ ಬೈಕ್ ಗೆ ಬೆಂಕಿ ಹತ್ತಿರುವುದು ತಿಳಿದುಬಂದಿದೆ. ಮಧ್ಯರಾತ್ರಿ 2 ಗಂಟೆಗೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ತಕ್ಷಣವೇ ಅಕ್ಕಪಕ್ಕದ ಮನೆಯವರು ಸೇರಿ ನೀರು ಹಾಕಿ ಬೆಂಕಿ ಆರಿಸಿದ್ದಾರೆ.
ಇದರಿಂದ ಇಂದು ಶನಿವಾರಕ್ಕೆ ಮುಕ್ತಾಯಗೊಳ್ಳಬೇಕಿದ್ದ ಮೂರು ಠಾಣಾ ವ್ಯಾಪ್ತಿಯ ಕರ್ಫ್ಯೂ ಹಾಗೂ ನಗರದಲ್ಲಿ ಸೆಕ್ಷನ್ 144 ಸೋಮವಾರದ ವರೆಗೂ ಮುಂದುವರೆದಿದೆ. ಕರ್ಫ್ಯೂ ಮುಂದುವರೆಯುವ ಹಿನ್ನಲೆಯಲ್ಲಿ ಮರಾಠಿ ಅಭಿವೃದ್ಧಿ ನಿಗಮಗಳ ಸ್ಥಾಪನೆಗೆ ವಿರೋಧಿಸಿ ಕರೆದಿರುವ ಬಂದ್ ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ಉಂಟಾಗಿದೆ.
ಎಂದಿನಂತೆ ಅಂಗಡಿ ಮುಂಗಟ್ಡುಗಳು, ಹೋಟೆಲ್ ಗಳು ಬಾರ್ ಎಂಡ್ ರೆಸ್ಡೋರೆಂಟ್ ಗಳು ಬಂದ್ ಆಗಿವೆ. ದೊಡ್ಡಪೇಟೆ ಪೊಲೀಸ್ ಠಾಣೆ, ತುಂಗ ನಗರ ಹಾಗೂ ಕೋಟೆ ಪೊಲೀಸ್ ಕರ್ಫ್ಯು ಮುಂದುವರೆದಿದೆ. ಆದರೆ ನಿನ್ನೆಗಿಂತ ಕೊಂಚ ರಿಲ್ಯಾಕ್ಸ್ ಸಹ ದೊರೆತಿದೆ.