ಕಾಸರಗೋಡು: ಕಾಡು ಹಂದಿ ದಾಳಿಗೆ ಓರ್ವ ಮೃತಪಟ್ಟ ಘಟನೆ ಬುಧವಾರ ಸಂಜೆ ನೀರ್ಚಾಲು ಸಮೀಪ ನಡೆದಿದೆ.
ಮೃತಪಟ್ಟವರನ್ನು ಪುದುಕ್ಕೋಳೀಯ ಐತಪ್ಪ ನಾಯ್ಕ್(46) ಎಂದು ಗುರುತಿಸಲಾಗಿದೆ.
ಮನೆ ಸಮೀಪದ ಕಾಡಿಗೆ ತೆರಳಿದ್ದ ಸಂದರ್ಭದಲ್ಲಿ ಹಂದಿ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಐತಪ್ಪ ನಾಯ್ಕರನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.