ಪುತ್ತೂರು: ವಿದ್ಯುತ್ ಕಂಬದಲ್ಲಿ ಇಂಟರ್ನೆಟ್ ಕೇಬಲ್ ಅಳವಡಿಸುವ ಬೇಳೆ ವಿದ್ಯುತ್ ಸ್ಪರ್ಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಪದ್ಮನಾಭ್ ಎನ್ನುವವರು ಮೃತಪಟ್ಟಿದ್ದಾರೆ.
ಪುತ್ತೂರಿನ ಖಾಸಗಿ ಸಂಸ್ಥೆಯವರು ಅಡಿಯಲ್ಲಿ ಇಂಟರ್ನೆಟ್ ಕೇಬಲ್ ಅಳವಡಿಸುವ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈ ವಿದ್ಯುತ್ ಅವಘಡ ನಡೆದಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಹಾದಿ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸುತ್ತವೆ.