News Kannada
Monday, February 06 2023

ಕರ್ನಾಟಕ

ಮಡಿಕೇರಿ: ಕಾಡಾನೆ ತುಳಿತಕ್ಕೊಳಗಾಗಿ ವ್ಯಕ್ತಿ ಸಾವು 

Photo Credit :

ಮಡಿಕೇರಿ: ಕಾಡಾನೆ ತುಳಿತಕ್ಕೊಳಗಾಗಿ ವ್ಯಕ್ತಿ ಸಾವು 

ಮಡಿಕೇರಿ: ಕಾಡಾನೆ ತುಳಿತದಿಂದಾಗಿ ಭಾನುವಾರ ರಾತ್ರಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಬಲ್ಲಮಾವಟಿಯ ಗ್ರಾಮ ಪಂಚಾಯ್ತಿಯ ಪೇರೂರು ಎಂಬ ಗ್ರಾಮದಲ್ಲಿ ನಡೆದಿದೆ.

ಮರತರನ್ನು ಅಪ್ಪಣ್ಣ(49) ಎಂದು ಗುರುತಿಸಲಾಗಿದ್ದು, ಇವರು ತಮ್ಮ ಮನೆಯಿಂದ ಅನತಿ ದೂರದ ಮನೆಯೊಂದರಲ್ಲಿ ನಡೆಯುತಿದ್ದ ಮದುವೆ ಸಮಾರಂಭಕ್ಕೆ ತೆರಳಿದ್ದರು. ಅಲ್ಲಿಂದ ರಾತ್ರಿ 11 ಘಂಟೆಗೆ ಹಿಂತಿರುಗುವಾಗ ಕಾಡಾನೆಯೊಂದು ಏಕಾಏಕಿ ಎದುರಾಗಿದ್ದು ಇವರನ್ನು ತುಳಿದು ಹಾಕಿದೆ.

ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇಂದು ಸ್ಥಳಕ್ಕೆ ತೆರಳಿದ ಮಡಿಕೇರಿ ವಿಭಾಗದ ಅರಣ್ಯಾಧಿಕಾರಿಗಳು ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಕೇವಲ ಮೂರು ದಿನಗಳ ಹಿಂದಷ್ಟೆ ಕಾಡಾನೆಯೊಂದು ನಾಗರಹೊಳೆಯಲ್ಲಿ ಅರಣ್ಯ ಇಲಾಖೆಯ ವಾಚ್‌ರ್‌ ಒಬ್ಬರನ್ನು ತುಳಿದು ಕೊಂದಿತ್ತು. ಭಾನುವಾರ ಸೋಮವಾರಪೇಟೆ ಸಮೀಪದ ಹಿರಿಕರ ಎಂಬಲ್ಲಿ ಕಾಡಾನೆಯೊಂದು ಹಾಡ ಹಗಲೇ ಕಾಫಿ ತೋಟದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರ ದಾಳಿ ನಡೆಸಿ ಇಬ್ಬರು ಗಾಯಗೊಂಡಿದ್ದರು. ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರುತಿದ್ದು ರೈತರು ಕಾಡಾನೆ ದಾಳಿಯಿಂದ ರಕ್ಷಣೆ ನೀಡುವಂತೆ ಮತ್ತು ಆನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಒತ್ತಾಯಿಸುತಿದ್ದಾರೆ.

See also  ಸರ್ಕಾರ ಕೆಲಸದ ಆಮಿಷವೊಡ್ಡಿ ಕೋಟ್ಯಂತರ ವಂಚನೆ: ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು