ಶಿವಮೊಗ್ಗ: ಹೆಜ್ಜೇನು ಕಚ್ಚಿ 39 ವರ್ಷದ ಅಖಿಲೇಶ್ ಎನ್ನುವವರು ಮೃತಪಟ್ಟ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಿಂಗನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಕೊರೋನಾ ಹಿನ್ನೆಲೆ ಬೆಂಗಳೂರಿನಲ್ಲಿದ್ದ ಅಖಿಲೇಶ್ ಊರಿಗೆ ಮರಳಿದ್ದರು ಎನ್ನಲಾಗಿದ್ದು, ಭಾನುವಾರ ಮನೆಯಲ್ಲಿ ಕೊನೆ ತೆಗೆಯುವ ವೇಳೆ ತೋಟಕ್ಕೆ ಹೋಗಿದ್ದಾಗ ಸುಮಾರು 50 ಕ್ಕೂ ಹೆಚ್ಚು ಹೆಜ್ಜೇನು ಹುಳಗಳು ಕಚ್ಚಿದೆ. ತಿಳಿದುಬಂದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಮಾಡಿದರು. ಆದರೆ ಆ ವೇಳೆಯಲ್ಲಿ ವೇಳೆ ಅಖಿಲೇಶ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಅಖಿಲೇಶ್ ವಿವಾಹಿತರಾಗಿದ್ದು, ಪತ್ನಿ, 2 ತಿಂಗಳ ಪುಟ್ಟ ಮಗು ಇದೆ ಎಂದು ತಿಳಿದು ಬಂದಿದೆ.