News Kannada
Wednesday, February 01 2023

ಕರ್ನಾಟಕ

ಹೋಳಿಗೆ ಊಟ ನೀಡಿ ಹೊಸವರ್ಷಾಚರಣೆ

Photo Credit :

ಹೋಳಿಗೆ ಊಟ ನೀಡಿ ಹೊಸವರ್ಷಾಚರಣೆ

ಮಂಡ್ಯ: ನಗರದ ಕ್ಯಾತುಂಗೆರೆ ಬಡಾವಣೆ ಸಮೀಪವಿರುವ ವಿಕಸನ ಸಂಸ್ಥೆಯ ಜೋಗುಳ ದತ್ತು ಸೇವಾ ಕೇಂದ್ರದಲ್ಲಿ ಗೋ ಸಂರಕ್ಷಣಾ ಗೆಳೆಯರ ಬಳಗ ಅರೆಚಾಕನಹಳ್ಳಿ ವತಿಯಿಂದ ಸೇವಾ ಕೇಂದ್ರದಲ್ಲಿ ಮಕ್ಕಳಿಗೆ ಹೋಳಿಗೆ ಊಟ ನೀಡುವ ಹೊಸ ವರ್ಷವನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಗೋ ಸಂರಕ್ಷಣಾ ಗೆಳೆಯರ ಬಳಗದ ವೆಂಕಟೇಶ್ ಗೋರಕ್ಷಕ ಅವರು, ವಿಕಸನ ಸಂಸ್ಥೆಯ ಜೋಗಳ ಶಿಶುಪಾಲನ ಕೇಂದ್ರದ ಮಕ್ಕಳೊಂದಿಗೆ ಹೊಸ ವರ್ಷದ ಮೊದಲ ದಿನ  ಹೋಳಿಗೆ ಊಟ ಸವಿಯುವ ಮೂಲಕ ಆಚರಿಸುತ್ತಿದ್ದೇವೆ. ಪ್ರತಿ ವರ್ಷ ಸಮಾಜಮುಖಿಯಾಗಿ ವಿವಿಧ ಕಾರ್ಯಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದೇವೆ, ಈ ವರ್ಷ ಇಲ್ಲಿ ಆಚರಣೆ ಮಾಡುತ್ತಿದ್ದೇವೆ ಎಂದರು.

ಸಮಾಜ-ಕುಟುಂಬದ ದೂರವಿರುವ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಸಮಾಜದ ಮೇಲೆ ಇರುತ್ತದೆ, ಸಂಘಸಂಸ್ಥೆಗಳಿಗೆ ನೆರವಾಗುವ ಮೂಲಕ ನಾವು ಅಳಿಲು ಸೇವೆ ಸಲ್ಲಿಸಬಹುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ಪಾಲನಕೇಂದ್ರದ ಅನುಸೂಯ, ರಾಜಮ್ಮ, ರಾಜಕುಮಾರ್, ದಾನಿಗಳಾದ ವಾಸು, ವೆಂಕಟೇಶ್, ರಾಧಿಕಾ ಕುಮಾರಸ್ವಾಮಿ ಅಭಿಮಾನಿ ಬಳಗದ ವೆಂಕಟೇಶ್, ಪ್ರೀತಂ ಇತರರು ಇದ್ದರು.

See also  ಗುಂಪು ಘರ್ಷಣೆ: ಇಬ್ಬರ ಬರ್ಬರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು