ಕಾಸರಗೋಡು: ಆಟೋ ರಿಕ್ಷಾದ ಟಯರ್ ಕಳಚಿದ ಪರಿಣಾಮ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಮಗು ಮೃತಪಟ್ಟ ಘಟನೆ ಸೋಮವಾರ ಸಂಜೆ ಬಂದ್ಯೋಡು-ಪೆರ್ಮುದೆ ರಸ್ತೆಯ ಮೀಪಿರಿಯಲ್ಲಿ ನಡೆದಿದೆ.
ಕಯ್ಯಾರ್ ಪಿಲಿಯಂದೂರಿನ ಕಾಸಿಂ-ಫಾಯಿಸಾ ದಂಪತಿ ಪುತ್ರ ರಿಜ್ವಾನ್ ಮೃತಪಟ್ಟ ಮಗು. ತಾಯಿ ಮತ್ತು ಮಗು ಬಂದ್ಯೋಡು ಕಡೆಗೆ ತೆರಳುತ್ತಿದ್ದಾಗ ಆಟೋ ರಿಕ್ಷಾದ ಟಯರ್ ಕಳಚಿದ್ದು, ಇದರಿಂದ ಆಟೋ ಮಗುಚಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಮಗು ಮೃತಪಟ್ಟಿದೆ.
ತಾಯಿ ಫಾಯಿಸಾ ಮತ್ತು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.