ತುಮಕೂರು: ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನದಿಂದ ಅಂತರಾಷ್ಟ್ರೀಯ ಹಾಗೂ ರಾಷ್ಟ್ರಮಟ್ಟದ ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಮತ್ತು ಸಂಶೋಧನ ಅಧ್ಯಯನ ವಿಭಾಗವು ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನವೀನ ಸಾಮಥ್ರ್ಯವು ಉನ್ನತ ಮಟ್ಟದ ಯಾವುದೇ ಮಾರುಕಟ್ಟೆಯ ವ್ಯವಹಾರದಲ್ಲಿ ಮುಖ್ಯ. ವ್ಯವಹಾರದ ಹಲವು ತೊಂದರೆಗಳ ನಿವಾರಣೆಗೂ ಅದು ಉಪಯುಕ್ತ ಎಂದರು.
‘ವ್ಯವಹಾರ ಮೌಲ್ಯವನ್ನು ಹೆಚ್ಚಿಸುವಲ್ಲಿ ಅನಲಿಟಿಕ್ಸ್ ಪಾತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿದ ಉಮೇಶ್ ವೀರಲಿಂಗಯ್ಯ, ರೆವೆನ್ಯೂ ಗ್ರೋತ್ ಮ್ಯಾನೇಜರ್, ಪೆಪ್ಸಿಕೋ ನ್ಯೂಯಾರ್ಕ್ ಅವರು ನಮ್ಮಲ್ಲಿ ನಾವು ವಿಶ್ವಾಸವಿರಿಸಿ, ಸಾಧಿಸಬೇಕಾಗಿರುವ ಗುರಿಯ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದರೆ ಸಾಧನೆಗೆ ಮೊದಲ ಹೆಜ್ಜೆ ಇಟ್ಟಂತಾಗುತ್ತದೆ ಎಂದರು.
ಯಾವ ರೀತಿಯ ವಿಶೇಷ ವಿಶ್ಲೇಷಣಾತ್ಮಕ ಗುಣಮಟ್ಟ ನಮ್ಮಲ್ಲಿರಬೇಕು, ಮಾರುಕಟ್ಟೆಯ ಲಾಭ ನಷ್ಟದ ಕನಿಷ್ಟ ಜ್ಞಾನ ಮತ್ತು ಸವಾಲುಗಳು ಎಷ್ಟು ಮುಖ್ಯವಾಗುತ್ತದೆ ಮತ್ತು ಮಾರಾಟವನ್ನು ಹೆಚ್ಚಿಸಲು ತಾಂತ್ರಿಕತೆಯ ಉಪಯೋಗಗಳ ಬಗ್ಗೆ ಮಾತನಾಡಿದ ಅವರು ಸಣ್ಣ ಹಳ್ಳಿಯಿಂದ ಬಂದು, ತುಮಕೂರು ವಿ. ವಿಯಲ್ಲಿ ತಮ್ಮ ಪದವಿ ಮುಗಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಉದ್ಯೋಗ ಪಡೆಯುವುದರಲ್ಲಿ ಉಂಟಾದ ಸವಾಲುಗಳು ಮತ್ತು ಅದರಲ್ಲಿ ಯಶಸ್ವಿಯಾದ ಬಗ್ಗೆ ಮಾತನಾಡಿದರು.
ಉಪನ್ಯಾಸದ ನಂತರ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಪದವಿಯ ನಂತರ ಯಾವುದೇ ಕಂಪನಿಯ ಸಂದರ್ಶನಕ್ಕೆ ಬೇಕಾದ ತಯಾರಿಯ ಕುರಿತು ವಿವರಿಸಿದರು.
ತುಮಕೂರು ವಿ. ವಿ. ವಾಣಿಜ್ಯ ಮತ್ತು ಸಂಶೋಧನ ಅಧ್ಯಯನ ವಿಭಾಗದ ಮುಖ್ಯಸ್ಥ ಪೆÇ್ರ. ಪಿ. ಪರಮಶಿವಯ್ಯ, ಕಾರ್ಯಕ್ರಮದ ಸಂಚಾಲಕ ಡಾ. ಎಸ್. ದೇವರಾಜಪ್ಪ, ಪ್ರಾಧ್ಯಾಪಕರಾದ ಪೆÇ್ರ. ಜಿ. ಸುದರ್ಶನ ರೆಡ್ಡಿ, ಪೆÇ್ರ. ಬಿ. ಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.