ದಾವಣಗೆರೆ: ಪ್ರಜಾಕೀಯ ಪಕ್ಷದ ಬೆಂಬಲಿಗ ಚೇತನಕುಮಾರ ನಾಯ್ಕ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ನಟ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಇಂದು ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿಗೆ ಭೇಟಿ ನೀಡಿ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ವೇಳೆ ಅರೇಹಳ್ಳಿ ಜನತೆ ಉಪೇಂದ್ರಗೆ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಉಪೇಂದ್ರನನ್ನು ನೋಡಲು ಜನರು ಮುಗಿಬಿದ್ದಿದ್ರು. ಟ್ರಾಕ್ಟರ್ ಟ್ರೈಲರ್ ಮೇಲೆ ನಿಂತು ಉಪೇಂದ್ರ ಜನರನ್ನು ಉದ್ದೇಶಿಸಿ ಮಾತನಾಡಿದರು.
ಆ ವೇಳೆ, “ಪ್ರಜಾಕೀಯ ಪಕ್ಷವನ್ನು ಗೆಲ್ಲಿಸಿ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದೀರಿ. ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು. ನೀವು ಗೆಲ್ಲಿಸಿರುವ ಅಭ್ಯರ್ಥಿ ಪ್ರಭುವಲ್ಲ. ಅವನು ಕೆಲಸಗಾರ. ಕರ್ನಾಟಕಕ್ಕೆ ನಿಮ್ಮ ಹಳ್ಳಿ ಸ್ಪೂರ್ತಿಯಾಗಿದೆ ” ಎಂದು ಹೇಳಿದರು.