News Kannada
Tuesday, November 29 2022

ಕರ್ನಾಟಕ

ಜಾರಕಿಹೊಳಿಯ ಸಿಡಿ ವಿಚಾರದಲ್ಲಿ ನನ್ನನ್ನ ಹಣಿಯಲು ಯತ್ನಿಸಲಾಗುತ್ತಿದೆ: ಡಿ.ಕೆ.ಶಿವಕುಮಾರ್ - 1 min read

Photo Credit :

ಜಾರಕಿಹೊಳಿಯ ಸಿಡಿ ವಿಚಾರದಲ್ಲಿ ನನ್ನನ್ನ ಹಣಿಯಲು ಯತ್ನಿಸಲಾಗುತ್ತಿದೆ: ಡಿ.ಕೆ.ಶಿವಕುಮಾರ್

ಶಿವಮೊಗ್ಗ: ರಮೇಶ್ ಜಾರಕಿಹೊಳಿಯ ಸಿಡಿ ವಿಚಾರದಲ್ಲಿ ನನ್ನನ್ನ ಹಣಿಯಲು ಯತ್ನಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ಗುಡುಗಿದ್ದಾರೆ.

ಅವರು  ಸೈನ್ಸ್ ಮೈದಾನದಲ್ಲಿ ಜನಾಕ್ರೋಶ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಿಡಿ ವಿಷಯಕ್ಕೆ ಸಂಬಂಧಿಸಿದಂತೆ ಸಮಯ ಬಂದಾಗ ಮಾತನಾಡುತ್ತೇನೆ. ನನ್ನನ್ನ ಹಣಿಯಲು ಹಲವರು ಹೊಂಚುಹಾಕಿ ಕೂತಿದ್ದಾರೆ. ಯಾವುದಕ್ಕೂ ಹೆರುವ ಮಗನು ನಾನನ್ನಲ್ಲವೆಂದರು

ನಾನು ಇಡಿ ಪ್ರಕರಣದಲ್ಲಿ ಬಂಧಿತನಾಗಿದ್ದಾಗ ಮೊಟ್ಟ ಮೊದಲಬಾರಿಗೆ ಶಿವಮೊಗ್ಗ ನಗರದಲ್ಲಿಯೇ ಪ್ರತಿಭಟನೆ ನಡೆದಿದ್ದು, ನಂತರ ರಾಜ್ಯಾದ್ಯಂತ ನಡೆಯಿತು. ಹಾಗಾಗಿ ಶಿವಮೊಗ್ಗದ ಬಗ್ಗೆ ಅಪಾರ ಪ್ರೀತಿ ಎಂದು ಹೇಳಿದರು.

ದೇಶದಲ್ಲಿ,  ರಾಜ್ಯದಲ್ಲಿ ಬದಲಾವಣೆ ಅವಶ್ಯಕತೆ ಇದೆ. ನಾವು ಮತ್ತೆ ಅಧಿಕಾರಕ್ಕೆ ಬಂದು ಬಿಜೆಪಿಯ ದುರಾಡಳಿತವನ್ನ ಕೊನೆಗೊಳಿಸುತ್ತೇವೆ ಎಂದು ಘೋಷಿಸಿದರು.

ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ವರ ವಿರುದ್ಧ 307 ಪ್ರಕರಣ ದಾಖಲಾಗಿದೆ. ಆದರೆ ಪೊಲೀಸರು ಒಂದು ಅರ್ಥ ಮಾಡಿಕೊಳ್ಳಬೇಕು. ರಾತ್ರೋರಾತ್ರಿ ಸರ್ಕಾರ ಬದಲಾವಣೆ ಆಗುತ್ತದೆ. ಅಧಿಕಾರ ಶಾಶ್ವತವಲ್ಲ. ಪೊಲೀಸರು ತಮ್ಮ ಡ್ಯೂಟಿ ಮಾಡಬೇಕು ಯಾವ ಪಕ್ಷದ ಪರ ಕೆಲಸ ಮಾಡಬಾರದು.

ಆದರೆ ಭದ್ರಾವತಿಯಲ್ಲಿ ಪೊಲೀಸರು ಪಕ್ಷಪಾತ ನಡೆಸಿದ್ದಾರೆ. ಶಾಸಕರ ಮಗರನ್ನ ಬಂಧಿಸಿದ್ದೀರಿ. ಆದರೆ ನಾವು ಪ್ರತಿ ದೂರು ಕೊಟ್ಟಿದ್ದೀವಲ್ಲಾ ಏನಾಯಿತು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ  ಬಿಜೆಪಿ ನುಡಿದಂತೆ ನಡೆದುಕೊಂಡಿಲ್ಲ. ಕೊರೋನ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸಹಯಮಾಡಲು ಸಿಎಂ ಬಿಎಸ್ ವೈಗೆ ಆಗಲಿಲ್ಲ . ಮಡಿವಾಳರಿಗೆ, ಆಟೋ ಚಾಲಕರಿಗೆ, ಸವಿತಾ ಸಮಾಜದವರಿಗೆ ಐದು ಸಾವಿರ ರೂ ನೀಡುತ್ತೇವೆ ಎಂದು ಭರವಸೆ ನೀಡಿದ ಸಿಎಂ ಯಡಿಯೂರಪ್ಪನವರು ಯಾರಿಗೂ ಒಂದು ಪೈಸೆ ನೀಡಲಿಲ್ಲವೆಂದರು.

ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ಯಾವನೋ ಒಬ್ಬ ದೂರು ಕೊಟ್ಟಿದ್ದಕ್ಕೆ ಎಸ್ಪಿ ಕೇಸ್ ಹಾಕಲು ಮುಂದಾಗುತ್ತಾರೆ. ಸಿಎಂ ಬಿಎಸ್ ವೈ ಸೋನಿಯಾ ಗಾಂಧಿ ವಿರುದ್ಧದ ದೂರಿಗೆ ಬಿ.ರಿಪೋರ್ಟ್ ಹಾಕಿಸಿ ಪ್ರಕರಣವನ್ನ ಮುಕ್ತಾಯಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದರು.

ಆ ಭರವಸೆನೂ ಈಡೇರಿಸಲಿಲ್ಲವೆಂದು ಗುಡುಗಿದ ಅವರು, ಸೋನಿಯಾ ಗಾಂಧಿಯ ವಿರುದ್ಧವೇ ದೂರು ದಾಖಲಿಸುತ್ತೀರಿ ಎಂದರೆ ಇನ್ನು ನಾನು ಸಂಗಮೇಶ್ವರ್ ಯಾವ ಲೆಕ್ಕ, ಕಾರ್ಯಕರ್ತರು ಎಲ್ಲಿಯವರೆಗೆ ಬೆನ್ನೆಲುಬಾಗಿ ಇರುತ್ತಾರೋ ಅಲ್ಲಿವರೆಗೆ ನಾವು ಹೋರಾಡುತ್ತೇವೆ ಎಂದರು.

See also  ಎಲ್ಲಾ ರೀತಿಯ ಬೆಳೆ ಸಾಲ ಮನ್ನಾಕ್ಕೆ ಒತ್ತಾಯಿಸಿ ಸಿಎಂ ಗೆ ಮನವಿ ಸಲ್ಲಿಸಿದ ಸಹಕಾರ ಯೂನಿಯನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು