News Kannada
Monday, December 05 2022

ಕರ್ನಾಟಕ

ಪಿರಿಯಾಪಟ್ಟಣದಲ್ಲಿ ಕನ್ನಂಬಾಡಿಯಮ್ಮನ ಅದ್ಧೂರಿ ಬ್ರಹ್ಮರಥೋತ್ಸವ

Photo Credit :

ಪಿರಿಯಾಪಟ್ಟಣದಲ್ಲಿ ಕನ್ನಂಬಾಡಿಯಮ್ಮನ ಅದ್ಧೂರಿ ಬ್ರಹ್ಮರಥೋತ್ಸವ

ಪಿರಿಯಾಪಟ್ಟಣ: ಇತಿಹಾಸ ಪ್ರಸಿದ್ಧ ಪಟ್ಟಣದ ಶಕ್ತಿದೇವತೆ ಶ್ರೀ ಕನ್ನಂಬಾಡಿಯಮ್ಮನವರ ಬ್ರಹ್ಮರಥೋತ್ಸವ ಭಕ್ತಾಧಿಗಳ ಸಮ್ಮುಖದಲ್ಲಿ ಸಂಪ್ರದಾಯದಂತೆ ವಿಜೃಂಭಣೆಯಿಂದ ನೆರವೇರಿತು.

ರಾಜ್ಯದ ವಿವಿಧೆಡೆ ಅಸಂಖ್ಯಾತ ಭಕ್ತರನ್ನು ಹೊಂದಿರುವ ಪಟ್ಟಣದ ಅಧಿದೇವತೆ ಕನ್ನಂಬಾಡಿಯಮ್ಮನ ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇಡೀ ಪಟ್ಟಣ ಜಾತ್ರಾ ಸಂಭ್ರಮದಲ್ಲಿ ತೇಲುತ್ತಿತ್ತು.  ಮಂಗಳವಾರ ಬೆಳಿಗ್ಗೆ 10.30 ಗಂಟೆಯಿಂದ 11.55 ಗಂಟೆ ಒಳಗೆ ನಡೆದ ಶುಭ ವೃಷಭ ಲಗ್ನದಲ್ಲಿ ದೇವರ ವಿಗ್ರಹ ತಂದು ರಥದ ಸುತ್ತ ಮೆರವಣಿಗೆ ನಡೆಸಿ ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾಧಿಗಳ ಜಯಘೋಷದ ನಡುವೆ ಎಳೆಯಲಾಯಿತು.  ಈ ವೇಳೆ ಭಕ್ತಾಧಿಗಳು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಸಮರ್ಪಿಸಿದರು, ಪೂಜಾ ಕೈಂಕರ್ಯಗಳ ನೇತತ್ವವನ್ನು ಪ್ರಧಾನ ಅರ್ಚಕ ವೇಣುಗೋಪಾಲ್ ವಹಿಸಿದ್ದರು. ಸಂಜೆ ಪೇಟೆ ಬೀದಿಯಲ್ಲಿ ದೇವರ ಮೆರವಣಿಗೆ ನಡೆಯಿತು.

ಬುಧವಾರ ಪಟ್ಟಣದ ಕೋಟೆ ಮತ್ತು ಉಪ್ಪಾರಗೇರಿ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಲಿದೆ, ಗುರುವಾರ ಸಂಜೆ ದೇವಾಲಯ ಬಳಿಯ ಕಲ್ಯಾಣಿಯಲ್ಲಿ ದೇವರ ತೆಪೆÇ್ಪೀತ್ಸವ ನಡೆಯಲಿದೆ,  ಬ್ರಹ್ಮರಥೋತ್ಸವಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಾಗೂ ತಂಪು ಪಾನೀಯ ವಿತರಣೆ ಶ್ರೀ ವಿನಾಯಕ ಗೆಳೆಯರ ಬಳಗ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆಯಿತು, ಬಿ.ಎಂ ರಸ್ತೆಯಲ್ಲಿ ರಥೋತ್ಸವ ನಡೆದಿದ್ದರಿಂದ ಸಂಚಾರ ದಟ್ಟಣೆ ನಿಯಂತ್ರಿಸಿ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಆರಕ್ಷಕ ಇಲಾಖೆ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಜಗದೀಶ್ ಹಾಗೂ ಬಿ.ಆರ್ ಪ್ರದೀಪ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪುರಸಭೆ ವತಿಯಿಂದ ರಸ್ತೆ ಧೂಳು ತಪ್ಪಿಸಲು ನೀರು ಸರಬರಾಜು ಮತ್ತು ಕೊರೋನಾ ಸೋಂಕು ತಡೆಗಟ್ಟುವ ಮುಂಜಾಗೃತಾ ಕ್ರಮದ ಬಗ್ಗೆ ಧ್ವನಿವರ್ಧಕ ಮೂಲಕ ಅರಿವು ಮೂಡಿಸಲಾಯಿತು.

ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ರಥೋತ್ಸವ ವೇಳೆ ಹಾಜರಿದ್ದು ವಿಶೇಷ ಪೂಜೆ ಸಲ್ಲಿಸಿದರು, ಶಾಸಕರ ಪತ್ನಿ ಮತ್ತು ಕುಟುಂಬದವರು, ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು, ಪಟ್ಟಣ ಸೇರಿದಂತೆ ವಿವಿಧೆಡೆಯ ಭಕ್ತಾಧಿಗಳು ಆಗಮಿಸಿ ರಥೋತ್ಸವ ಮತ್ತು ದೇವರ ದರ್ಶನ ಪಡೆದರು. ದೇವಾಲಯ ಆವರಣದಲ್ಲಿ ವಿವಿಧ ಆಟಿಕೆಗಳ ಮಾರಾಟ ಭರ್ಜರಿಯಾಗಿ ನಡೆಯಿತು.

See also  ಚಿಕ್ಕಮಗಳೂರಿನಲ್ಲಿ ಎಸ್ಪಿ ಅಣ್ಣ ಮಲೈ ಅಬ್ಬರ ಶುರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು