News Kannada
Sunday, December 04 2022

ಕರ್ನಾಟಕ

ನಂಜನಗೂಡು ಗೌತಮ ಪಂಚ ಮಹಾರಥೋತ್ಸವ ರದ್ದು

Photo Credit :

ನಂಜನಗೂಡು ಗೌತಮ ಪಂಚ ಮಹಾರಥೋತ್ಸವ ರದ್ದು

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ  ಪ್ರತಿ ವರ್ಷ ನಡೆಯುತ್ತಿದ್ದ ಗೌತಮ ಪಂಚ ಮಹಾ ರಥೋತ್ಸವವನ್ನು ಈ ಬಾರಿ ರದ್ದು ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

ಅಟ್ಟಹಾಸ ಮರೆಯಲು ಆರಂಭಿಸಿರುವ ಕೊರೊನಾ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಗೌತಮ ಪಂಚ ಮಹಾರಥೋತ್ಸವ ಬದಲಾಗಿ ಚಿಕ್ಕ ತೇರಿನಲ್ಲಿ ಉತ್ಸವ ಜರುಗಿಸುವಂತೆ ಸೂಚನೆ ನೀಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಅರ್ಚಕರು ಮತ್ತು ಸಿಬ್ಬಂದಿಗಳು ಸ್ಥಳಿಯರ ನೆರವಿನೊಂದಿಗೆ ಆಚರಿಸುವಂತೆ ಸೂಚನೆ ನೀಡಲಾಗಿದೆ.

ಮಾರ್ಚ್ 19ರಿಂದ 30ರ ತನಕ ನಡೆಯುವ ಹಲವು ಧಾರ್ಮಿಕ ಸಂಪ್ರದಾಯಗಳನ್ನು ದೇವಸ್ಥಾನದ ಒಳ ಆವರಣದಲ್ಲಿ ನಡೆಸುವಂತೆ ಕೂಡ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ. ಆದರೆ ಜಿಲ್ಲಾಡಳಿತದ ಈ ಕ್ರಮದಿಂದ ಜನರಿಗೆ ಹಾಗೂ ಆಡಳಿತ ನಡೆಸುವರಿಗೆ ಕೆಡುಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಹೊರ ರಾಜ್ಯ ಹಾಗೂ ಹೊರ ತಾಲೂಕುಗಳಿಂದ ಬರುವ ಭಕ್ತರಿಗೆ ತಾತ್ಕಾಲಿಕ ನಿಷೇಧ ಮಾಡಲಿ. ಆದರೆ ರಥೋತ್ಸವವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಪ್ರತಿಭಟನಾನಿರತರು ಮನವಿ ಮಾಡಿದ್ದಾರೆ. ಆದರೆ ಚಿಕ್ಕತೇರು ಎಂದರೆ ಮೂರು ತೇರುಗಳಿವೆ ಗಣಪತಿ ರಥ ಚಂಡಿಕೇಶ್ವರ ರಥ ಸುಬ್ರಹ್ಮಣ್ಯ ಸ್ವಾಮಿ ರಥ ಇವುಗಳಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಚಿಕ್ಕ ಜಾತ್ರೆಯ ರೀತಿಯಲ್ಲಿ ಎಳೆಯುವರೇ ಅಥವಾ ದಿನನಿತ್ಯ ಉತ್ಸವಮೂರ್ತಿಯನ್ನು ಕೂರಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.

See also  ಪ್ರಾಕೃತಿಕ ವಿಕೋಪ ಪರಿಹಾರ ವಿತರಣೆ ವಿಫಲ : ಈಶ್ವರ ಖಂಡ್ರೆ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು