News Kannada
Thursday, October 06 2022

ಕರ್ನಾಟಕ

ಶಿವಯೋಗಿ ಕಳಸದ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ - 1 min read

Photo Credit :

ಶಿವಯೋಗಿ ಕಳಸದ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ

ಚಾಮರಾಜನಗರ: ಆಮ್ಲಜನಕ ಕೊರತೆಯಿಂದ ೨೪ ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂದಿಸಿದಂತೆ ಜಿಲ್ಲಾಸ್ಪತ್ರೆಗೆ ಆ್ಯಕ್ಸಿಜನ್ ದುರಂತದ ತನಿಖಾಧಿಕಾರಿಯಾಗಿರುವ ಕೆಎಸ್‌ಅರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಜಿ ಲ್ಲಾ ಸರ್ಜನ್ ಹಾಗೂ ಜಿಲ್ಲಾಧಿಕಾರಿ ಡಾ ಎಂ ಆರ್‌ ರವಿ ಅವರಿಂದ ಮಾಹಿತಿ ಪಡೆದುಕೊಂಡ ಅವರು ಆಕ್ಸಿಜನ್ ಪ್ಲಾಂಟ್ ಹಾಗೂ ಸಿಲಿಂಡರ್ ದಾಸ್ತಾನಿನ ಕೊಠಡಿಗೆ ತೆರಳಿ ವೀಕ್ಷಿಸಿದರು. ಬಳಿಕ ಹೊರರೋಗಿಗಳ ಚೀಟಿ ಪಡೆಯುತ್ತಿದ್ದ ರೋಗಿಗಳು, ಕೋವಿಡ್ ಟೆಸ್ಟ್ ಮಾಡಿಸಲು ಬಂದವರ ಜತೆ ಅವರ ಊರು, ಯಾವ ಕಾರಣಕ್ಕಾಗಿ ಬಂದಿರುವುದು, ಜಿಲ್ಲಾಸ್ಪತ್ರೆ ಸೇವೆ ಹೀಗೆ ಹಲವು ಮಾಹಿತಿ ಪಡೆದರು. ಇವರ ಭೇಟಿಯ ವೇಳೆ ಕನ್ನಡಪರ ಹೋರಾಟಗಾರ ಶಾ. ಮುರುಳಿ ಏಕಾಂಗಿ ಪ್ರತಿಭಟನೆ ನಡೆಸಿ ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮೈಸೂರಿನ ಡಿಸಿ ರೋಹಿಣಿ ಸಿಂಧೂರಿ ಅವರೇ ಕಾರಣ ಎಂದು ಆರೋಪಿಸಿ ಅವರ ಅಮಾನತ್ತಿಗೆ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಹಾಗೂ ತನಿಖಾಧಿಕಾರಿ ಕಳಸದ್ ಅವರು ಪ್ರತಿಭಟನಾಕಾರನ ಮನವೊಲಿಕೆ ಮಾಡಲು ಪ್ರಯತ್ನಿಸಿದರೂ ಕೂಡ ನಿಲ್ಲಿಸದ ಅವರು ಡೀನ್‌ ಕೊಠಡಿಯ ಮುಂಭಾದ ಮೆಟ್ಟಿಲಿನ ಬಳಿಯೇ ಮಲಗಿ ಆಕ್ರೋಶ ಹೊರಹಾಕುತ್ತಿದ್ದಾರೆ‌. ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕಳಸದ್‌ ಅವರು ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಪರಿಶೀಲಿಸಿದ್ದೇನೆ. ವೈದ್ಯರು, ಡಿಸಿ ಜತೆ ಸಭೆ ನಡೆಸಿದ್ದು, ಸದ್ಯ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಪರಿಶೀಲನೆ ಮತ್ತು ಸಭೆ ಬಳಿಕ ಮಾತನಾಡಿದ ಅವರು, ತನಿಖೆ ಪ್ರಾಥಮಿಕ ಹಂತದಲ್ಲಿದೆ. ಎಲ್ಲರ ಬಳಿ ಮಾಹಿತಿ ಪಡೆದಿದ್ದು ವರದಿಯಲ್ಲಿ ಎಲ್ಲವೂ ತಿಳಿಸುತ್ತೇನೆಂದರು.ಮೇಲ್ನೋಟಕ್ಕೆ ಯಾರ ಲೋಪ ಕಂಡು ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿ ವರದಿ ಸಲ್ಲಿಸಲು ಮೂರು ದಿನಗಳ ಅವಕಾಶವಿದೆ ಎಂದರು. ಮೈಸೂರಿನ ಆಕ್ಸಿಜನ್ ಪ್ಲಾಂಟ್​ಗೂ ಕೂಡ ಭೇಟಿ ನೀಡುತ್ತೇನೆ. ಸವಿವರವಾದ ವರದಿ ಸಲ್ಲಿಸುತ್ತೇನೆ ಎಂದರು‌.

See also  ಬಿಜೆಪಿ ಆಮಿಷಕ್ಕೆ ಒಳಗಾಗದಂತೆ ಕೈ ನಾಯಕರಿಗೆ ಎಚ್ಚರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು