News Kannada
Wednesday, October 05 2022

ಕರ್ನಾಟಕ

ಚಾಮರಾಜನಗರದಲ್ಲಿ ಬೆಡ್‌ ಸಿಗದೇ ಸೋಂಕಿತ ಸಾವು - 1 min read

Photo Credit :

ಚಾಮರಾಜನಗರದಲ್ಲಿ  ಬೆಡ್‌ ಸಿಗದೇ ಸೋಂಕಿತ ಸಾವು

ಚಾಮರಾಜನಗರ: ಮೊನ್ನೆಯಷ್ಟೆ ೨೪ ಜನ ಸೋಂಕಿತರು ಆಖ್ಸಿಜನ್‌ ಸಿಗದೇ ಮೃತಪಟ್ಟ ಘಟನೆ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಅಗಿದ್ದ ಬೆನ್ನಲ್ಲೇ ಮನೆಯಲ್ಲೇ ಚಿಕಿತ್ಸೆ ಪಡೆಯುತಿದ್ದ ಸೋಂಕಿತನೊಬ್ಬ ಮೃತಪಟ್ಟ ಘಟನೆ ವರದಿ ಅಗಿದೆ. ಹೋಮ್​​ ಐಸೋಲೇಷನ್​ನಲ್ಲಿದ್ದ ಸೋಂಕಿತನಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ಬಂದಾಗ ಬೆಡ್ ಸಿಗದೆ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಗರದ ಅಂಬೇಡ್ಕರ್ ಬಡಾವಣೆಯ 25 ವರ್ಷದ ಯುವಕ ಮೃತ ದುರ್ದೈವಿ ಆಗಿದ್ದು ಮೃತರಾದ ಬಳಿಕೆ ಕೆಲ ಕಾಲ ಬಿಗುವಿನ ಪರಿಸ್ಥಿತಿ ಏರ್ಪಟ್ಟಿತ್ತು. ಸ್ಯಾಚುರೇಷನ್ ಕಡಿಮೆಯಾಗಿ ಅಡ್ಮಿಟ್ ಆಗಲು ಬಂದಿದ್ದ ಈತ, ಅರ್ಧ ತಾಸು ಕಾದರೂ ಬೆಡ್ ಸಿಗದಿದ್ದರಿಂದ ಆಸ್ಪತ್ರೆ ಆವರಣದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು, ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿ ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ.ಬಳಿಕ ಸ್ಥಳಕ್ಕೆ ದೌಡಾಯಿಸಿ ಮಹಿಳಾ ಠಾಣೆ ಪಿಐ ಪುಟ್ಟಸ್ವಾಮಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

See also  ಸಾಲಗಾರರ ಕಾಟ, ವಿಷ ಸೇವಿಸಿ ಹೋಟೆಲ್ ಮಾಲೀಕ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು