News Kannada
Tuesday, February 07 2023

ಕರ್ನಾಟಕ

ಸೋಂಕಿತ ಮಹಿಳೆಯ ಮೇಲೆ ಆಸ್ಪತ್ರೆಯಲ್ಲೇ ಲೈಂಗಿಕ ಕಿರುಕುಳ ; ವಾರ್ಡ್‌ ಬಾಯ್‌ ಬಂಧನ

Photo Credit :

ಸೋಂಕಿತ ಮಹಿಳೆಯ ಮೇಲೆ ಆಸ್ಪತ್ರೆಯಲ್ಲೇ ಲೈಂಗಿಕ ಕಿರುಕುಳ ; ವಾರ್ಡ್‌ ಬಾಯ್‌ ಬಂಧನ

ಹುಬ್ಬಳ್ಳಿ: ಇಲ್ಲಿನ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶ್ವಸಿಯಾಗಿದ್ದಾರೆ.ಬಂಧಿತನನ್ನು ಅಶೋಕ್ ಹಲಗಿ ಎಂದು ಗುರುತಿಸಲಾಗಿದೆ. ಕಳೆದ 23ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೊಂಕಿತ ಮಹಿಳೆಯ ಮೇಲೆ ವಾರ್ಡಬಾಯ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಸೋಂಕಿತ ಮಹಿಳೆ ಪುತ್ರನಿಗೆ ಈ ಕುರಿತು ಮಾಹಿತಿ ನೀಡಿದ್ದಳು.
ಘಟನೆ ಬೆಳಕಿಗೆ ಬಂದ ನಂತರ ಸೊಂಕಿತ ಮಹಿಳೆಯ ಪರವಾಗಿ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ನಂತರ ಕೃತ್ಯವನ್ನ ಆಸ್ಪತ್ರೆಯ ಆಡಳಿತ ಮಂಡಳಿ ಅಲ್ಲಗೆಳೆದಿದ್ದರು. ಅಲ್ಲದೇ ದೂರುದಾರನ ವಿರುದ್ಧ ಸುಳ್ಳು ಆರೋಪ ಮಾಡಿದ್ರು. ಈ ಘಟನೆಯ ಬಗ್ಗೆ ವಿಸ್ತೃತವಾಗಿ ತನಿಖೆ ನಡೆಸಿದ ವಿದ್ಯಾನಗರ ಪೋಲೀಸರು ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಾರ್ಡ್ ಬಾಯ್ ಅಶೋಕ ಹಲಗಿಯನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ವಾರ್ಡಬಾಯ್ ಅಶೋಕ್ ಹಲಗಿ ಕೃತ್ಯ ಎಸಗಿದ ನಂತರ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಅಲ್ಲದೇ ಆಸ್ಪತ್ರೆಯಿಂದ ಪರಾರಿಯಾಗಿ ಅಪಘಾತದಲ್ಲಿ ಗಾಯಗೊಂಡಿದ್ದ. ಆರೋಪಿಯ ಚಲನವಲನ ಪತ್ತೆ ಮಾಡಿದ ಪೊಲೀಸರು ಆರೋಪಿಯನ್ನ ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

See also  ಇಂದು ಕೂಡ್ಲಿಗೆ ಆಗಮಿಸಿದ ಅನುಪಮಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು