News Kannada
Friday, December 02 2022

ಕರ್ನಾಟಕ

ಅತ್ತಿಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ನಾದಿನಿಯೂ ಆತ್ಮಹತ್ಯೆ!

Photo Credit :

ಅತ್ತಿಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ನಾದಿನಿಯೂ ಆತ್ಮಹತ್ಯೆ!

ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತಿಗೆ ತಲೆ ಮೇಲೆ ಕಲ್ಲು ಎತ್ತುಹಾಕಿ ಕೊಲೆ ಮಾಡಿರುವ ನಾದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಪ್ರಿಯಾಂಕ(35) ಕೊಲೆಯಾಗಿದ್ದು, ಗೀತಾ(25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರೀಶ್ ಎಂಬುವರ ಪತ್ನಿ ಪ್ರಿಯಾಂಕ ಮತ್ತು ಸಹೋದರಿ ಗೀತಾ ನಡುವೆ ಸಣ್ಣಪುಟ್ಟ ವಿಚಾರಕ್ಕೂ ಹಲವು ಬಾರಿ ಜಗಳ ನಡೆಯುತ್ತಲೇ ಇತ್ತು. ಶನಿವಾರ ಕೂಡ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಗೀತಾ, ಅತ್ತಿಗೆ ತಲೆ ಮೇಲೆ ಕಲ್ಲು ಎತ್ತುಹಾಕಿ‌ ಕೊಲೆ ಮಾಡಿದ್ದು, ನಂತರ ಭಯದಲ್ಲಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಆರ್.ಅಶ್ವಿನಿ, ಎಎಸ್ಪಿ ವಿ‌.ಧನಂಜಯ, ವೃತ್ತ ನಿರೀಕ್ಷಕ ಕ್ಯಾತೇಗೌಡ, ಬಸರಾಳು ಪಿಎಸ್‌ಐ ಜಯಗೌರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

See also  ಮಹಿಳೆಯರು, ಮಕ್ಕಳ ರಕ್ಷಣೆಗೆ ವಿಶೇಷ ಗಮನಹರಿಸಲು ಕೊಡಗು ಡಿಸಿ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು