News Kannada
Friday, January 27 2023

ಕರ್ನಾಟಕ

ಮುಂದಿನ ವರ್ಷ ಜಾವಾ ಎಲೆಕ್ಟ್ರಿಕ್‌ ಬೈಕ್‌ ಮಾರುಕಟ್ಟೆಗೆ

Photo Credit :

 

ಬೆಂಗಳೂರು ; 1960-70 ರ ದಶಕದಲ್ಲಿ ದೇಶದ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ನಂಬರ್‌ ಒನ್‌ ಸ್ಥಾನ ಪಡೆದುಕೊಂಡಿದ್ದ ಜಾವಾ ಮೋಟಾರ್‌ ಸೈಕಲ್‌ ಇನ್ನು ಮುಂದೆ ಎಲೆಕ್ಟ್ರಿಕ್‌ ಆವೃತ್ತಿಯಲ್ಲೂ ಬಿಡುಗಡೆಗೆ ಸಜ್ಜಾಗಿದೆ. ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ವಾಹನ ತಯಾರಕರು ಎಲೆಕ್ಟ್ರಿಕ್‌ ವಾಹನಗಳ ಮೊರೆ ಹೋಗುತಿದ್ದಾರೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ, ಬಹುತೇಕ ಎಲ್ಲಾ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆಯತ್ತ ಗಮನ ಹರಿಸುತ್ತಿವೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ರೆಟ್ರೊ ಮಾಡರ್ನ್ ಬೈಕ್ ಜಾವಾ.
ಹೌದು, ಕಳೆದ ವರ್ಷ ಬಿಡುಗಡೆ ಮಾಡಿದ್ದ ಜಾವಾ ಕೂಡ ಎಲೆಕ್ಟ್ರಿಕ್ ಬೈಕ್ ಆಗಲಿದೆ. ಈಗಾಗಲೇ ಹೊಸ ಮಾಡೆಲ್ ಬೈಕ್​ನ ವಿನ್ಯಾಸಗಳು ರೆಡಿಯಾಗಿದ್ದು, ಅದರ ಫಸ್ಟ್ ಲುಕ್ ಫೋಟೋಗಳು ವೈರಲ್ ಆಗಿವೆ. ಕೆಲ ಮೂಲಗಳ ಪ್ರಕಾರ ಹೊಸ ಜಾವಾ ಇವಿ 2022 ರಲ್ಲಿ ಬಿಡುಗಡೆ ಆಗಲಿದೆ.ಪ್ರಸ್ತುತ ಮಾಹಿತಿ ಪ್ರಕಾರ ಈಗಾಗಲೇ ಬಿಡುಗಡೆಯಾಗಿರುವ ಜಾವಾ ಮಾದರಿಯಲ್ಲೇ ಎಲೆಕ್ಟ್ರಿಕ್ ಬೈಕ್​ಗಳ ವಿನ್ಯಾಸ ಮತ್ತು ವೈಶಿಷ್ಟ್ಯಗಳಿರಲಿದೆ. ಇದರ ಹೊರತಾಗಿ ಬ್ಯಾಟರಿ ಪ್ಯಾಕ್ ಅನ್ನು ಸಾಮಾನ್ಯ ಪೆಟ್ರೋಲ್ ಟ್ಯಾಂಕ್ ಅಡಿಯಲ್ಲಿರುವ ದೊಡ್ಡ ಸುತ್ತುವರಿದ ಕವಚದಲ್ಲಿ ರಚಿಸಲಾಗುತ್ತದೆ. ಹಾಗೆಯೇ ಚಾರ್ಜಿಂಗ್ ಪೋರ್ಟ್ ಮತ್ತು ಇತರ ವಿದ್ಯುತ್ ಘಟಕಗಳು ಟ್ಯಾಂಕ್‌ನ ಮೇಲ್ಭಾಗದಲ್ಲಿರಲಿದೆ.
ಇನ್ನು ಈ ಬೈಕ್ ತ್ವರಿತ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರಲಿದ್ದು, ಹಾಗೆಯೇ ಹೆಚ್ಚಿನ ವೇಗವನ್ನು ಇದರಲ್ಲಿ ನೀಡಲಾಗುತ್ತೆ ಎಂದು ಹೇಳಲಾಗಿದೆ. ಇದರಿಂದ ಜಾವಾ ಎಲೆಕ್ಟ್ರಿಕ್​ ಬೈಕ್​ನಲ್ಲಿ ಆರಾಮವಾಗಿ ಹೆಚ್ಚು ದೂರ ಪ್ರಯಾಣಿಸಬಹುದು.
ಸದ್ಯದ ಮಾಹಿತಿ ಪ್ರಕಾರ ಹೊಸ ಎಲೆಕ್ಟ್ರಿಕ್ ಬೈಕ್ ಮುಂದಿನ ವರ್ಷದ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ. ಆದರೆ ಈ ಬಗ್ಗೆ ಜಾವಾ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಹಿಂದೆ, ಜಾವಾ ಎಲೆಕ್ಟ್ರಿಕ್ ಮೋಟಾರ್ ವಿಭಾಗಕ್ಕೆ ಪ್ರವೇಶಿಸಲಿದೆ ಎಂದು ವರದಿಯಾಗಿತ್ತು. ಅದರಂತೆ ದಸರಾ ಮತ್ತು ದೀಪಾವಳಿ ಹಬ್ಬದ ವೇಳೆ ಜಾವಾ ಎಲೆಕ್ಟ್ರಿಕ್ ಬೈಕ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಬಹುದು.

See also  ಎದೆನೋವಿನಿಂದ ಯೋಧ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು