News Kannada
Saturday, November 26 2022

ಕರ್ನಾಟಕ

ಮಾಜಿ ಗೃಹ ಸಚಿವ ಡಾ ಪರಮೇಶ್ವರ್‌ ಜನ್ಮದಿನಕ್ಕೆ ರೌಡಿ ಶೀಟರ್‌ ನಿಂದ ಹೂವಿನ ಹಾರ - 1 min read

Photo Credit :

.

ಬೆಂಗಳೂರು : ಮಾಜಿ ಗೃಹ ಸಚಿವ, ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ|| ಜಿ ಪರಮೇಶ್ವರ್ ನಿನ್ನೆ 70 ನೇ ವರ್ಷದ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನೆಲಮಂಗಲದ ರೌಡಿ ಶೀಟರ್ ಒಂದಲ್ ರವಿ ಹೂಮಾಲೆ ಹಾಕಿ ಹುಟ್ಟು ಹಬ್ಬದ ಶುಭಾಷಯ ಕೋರಿದ್ದಾರೆ. ತುಮಕೂರಿನ ಸಿದ್ದಾರ್ಥ ನಗರದ ತಮ್ಮ ನಿವಾಸದಲ್ಲಿ ನಡೆದ ಹುಟ್ಟು ಹಬ್ಬ ಸಂಭ್ರಮಾಚರಣೆಯಲ್ಲಿ ಈ ಘಟನೆ ನಡೆದಿದೆ. ರೌಡಿ ಶೀಟರ್ ಒಬ್ಬ ಮಾಜಿ ಗೃಹ ಸಚಿವರಿಗೆ ಶುಭ ಕೋರಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ರೌಡಿ ಶೀಟರ್ ಒಂದಲ್‌ ರವಿ ಹಾಗೂ ಪರಮೇಶ್ವರ್ ಒಂದೇ ಸಮುದಾಯದವರಾಗಿದ್ದಾರೆ. ಸ್ವಜಾತಿ ಅಭಿಮಾನದಿಂದ ರೌಡಿ ಶೀಟರ್ ರವಿ ಶುಭಾಷಯ ಕೋರಿದ್ದಾರೆ. ರೌಡಿ ಶೀಟರ್ ಒಂದಲ್ ರವಿ ಸಹ ಪರಮೇಶ್ವರ್ ಸಹಕಾರದಿಂದ ರಾಜಕೀಯದಲ್ಲಿ ಸಕ್ರಿಯಗೊಳ್ಳುವ ಯೋಜನೆಯಲ್ಲಿದ್ದು, ನೆಲಮಂಗಲದಲ್ಲಿ ಮುಂಬರುವ ನಗರಸಭೆ ಚುನಾವಣೆಗೆ ಸಹ ಸ್ಪರ್ಧಿಯಾಗುವ ನಿಟ್ಟಿನಲ್ಲಿ ಪರಮೇಶ್ವರ್ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ.

 

See also  ನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡುವ ರೌಡಿಗಳಿದ್ದಾರೆ : ಅರಗ ಜ್ಞಾನೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು