News Kannada
Friday, December 09 2022

ಕರ್ನಾಟಕ

ಹಬ್ಬದ ಪ್ರಯುಕ್ತ ನಂದಿನಿ ಉತ್ಪನ್ನಗಳ ಮೇಲೆ ಶೇಕಡಾ 10 ರಿಯಾಯ್ತಿ

Photo Credit :

ಬೆಂಗಳೂರು, – ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗೆ ಕೆಎಂಎಫ್ ಸಿಹಿ ಸುದ್ದಿ ನೀಡಿದ್ದು, ಸಿಹಿ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ರಿಯಾಯ್ತಿ ನೀಡಿದೆ. ಆ.19ರಿಂದ 15 ದಿನ ಗಳ ಕಾಲ ರಾಜ್ಯಾದ್ಯಾಂತ ನಂದಿನಿ ಉತ್ಸವಕ್ಕೆ ಚಾಲನೆ ನೀಡಿರುವ ಕೆಎಂಎಫ್ ಸಿಹಿ ಉತ್ಪನ್ನಗಳ ಮೇಲೆ ರಿಯಾಯ್ತಿ ನೀಡಿದೆ. ಅಲ್ಲದೆ ಮಧುಮೇಹಿಗಳು ಮತ್ತು ಆಹಾರ ಕಾಳಜಿ ಇರುವರ ಅನುಕೂಲಕ್ಕಾಗಿ ಹೊಸದಾಗಿ ಸಿಹಿ ತಿನಿಸುಗಳನ್ನು ಬಿಡುಗಡೆ ಮಾಡಿದೆ ಎಂದು ಎಂದು ಕೆ ಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ತಿಳಿಸಿದ್ದಾರೆ.
ನಂದಿನಿ ನೈಸರ್ಗಿಕ ಹಾಗೂ ಆರ್ಯುವೇದ ಗುಣವುಳ್ಳ ಐಸ್‍ಕ್ರೀಮ್‍ಗಳು ಕೂಡ ಲಭ್ಯವಿದ್ದು, ಒಂದು ಕೊಂಡರೆ ಮತ್ತೊಂದು ಉಚಿತವಾಗಿ ದೊರೆಯಲಿದೆ. ಮೈಸೂರ್ ಪಾಕ್, ಪೇಡ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್, ಕ್ಯಾಶು, ಡ್ರೈಫ್ರೂಟ್, ಕೋಕೊನಟ್, ಚಾಕೋಲೇಟ್, ಬರ್ಫಿ, ಕುಂದ, ಜಾಮೂನ್, ರಸಗುಲ್ಲ, ಸಿರಿಧಾನದ ಲಾಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕೆ ಲಾಡು, ಸಿರಿಧಾನ್ಯ ಪಾಸಯ, ಸಿರಿಧಾನ್ಯ ಸಿಹಿ ಪೊಂಗಲ್, ಎಲ್ಲ ಸಿಹಿ ಉತ್ಪನ್ನಗಳು, ಕುಕ್ಕೀಸ್‍ಗಳ ಸಿಹಿ ಪೊಂಗಲ್, ಎಲ್ಲ ಸಿಹಿ ಉತ್ಪನ್ನಗಳು, ಕುಕಕೀಸ್‍ಗಳ ಮಾರಾಟ ದರದ ಮೇಲೆ ರಿಯಾಯಿತಿ ಸಿಗಲಿದೆ.

See also  ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ : ಒಂದೇ ತಿಂಗಳಲ್ಲಿ 200ಕ್ಕೂ ಹೆಚ್ಚು ಪ್ರಕರಣ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು