NewsKarnataka
Wednesday, November 24 2021

ಕರ್ನಾಟಕ

ಸಿಡಿಲು ಬಡಿದು ಅಚ್ಚರಿಯ ರೀತಿಯಲ್ಲಿ ಬದುಕಿ ಬಂದ ರೈತ

ವಿಜಯನಗರ: ಜಮೀನು ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದಂತ ರೈತನೊಬ್ಬ, ಸಂಜೆ ಮನೆಗೆ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಮಳೆಯ  ಜೊತೆಗೆ ಸಿಡಿಲು ಬಂದೆರಗಿದ್ರೂ.. ಕೂದಲೆಳೆಯ ಅಂತರದಲ್ಲಿ ಪಾರಾಗಿ, ಬದುಕಿ ಬಂದಿರೋ ಘಟನೆ, ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಸಮೀಪದ ಗರಗ ಗ್ರಾಮದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಮರಿಯಮ್ಮನಹಳ್ಳಿ ಹತ್ತಿರದ ಗರಗ ಗ್ರಾಮದ ರೈತ ಮೇದಾರ ನಿಂಗಪ್ಪ ಎಂಬುವರು ಜಮೀನಿನ ಕೆಲಸಕ್ಕೆ ಹೊಲಕ್ಕೆ ತೆರಳಿದ್ದರು. ಸಂಜೆ ಮನೆಗೆ ಹಿಂದಿರುಗುವ ಸಂದರ್ಭದಲ್ಲಿಯೇ ಜೋರು ಮಳೆ  ಆರಂಭಗೊಂಡಿದೆ. ಇದರ ನಡುವೆಯೂ ಮನೆಗೆ ಜೋರಾಗಿ ಧಾವಿಸಿದ್ದಾರೆ.

ಮನೆಗೆ ಬರುವ ಮಾರ್ಗಮಧ್ಯೆಯೇ ಮಳೆಯ ಜೊತೆಗೆ ಬಂದಂತ ಸಿಡಿಲು ಹೊಡೆದಿದೆ. ಈ ಸಿಡಿಲಿನಿಂದ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿಲು ಬಡಿತದಿಂದಾಗಿ ತಲೆಯಲ್ಲಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನು ಪರಿಶೀಲಿಸಿದಂತ ವೈದ್ಯರು ಹೊಲಿಗೆ ಹಾಕಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ ಅವರು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!