ಮಂಗಳೂರು: ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್‌ಆರ್ಟ್ಸ್, ಸೈನ್ಸ್, ಕಾಮರ್ಸ್ಅ್ಯಂಡ್ ಮ್ಯಾನೇಜ್ಮೆಂಟ್ ‘ಐಎಸ್‌ಡಿಸಿ’ ಸಹಭಾಗಿತ್ವದಲ್ಲಿಕೂಳೂರು ಕ್ಯಾಂಪಸ್‌ನಲ್ಲಿ ಸಂವಹನ ವಿನ್ಯಾಸ ಮತ್ತು ಫ್ಯಾಷನ್ ವಿನ್ಯಾಸದಲ್ಲಿ ಪದವಿ ತರಬೇತಿ ನಡೆಸಲಿದೆ. ಇದರ ಉದ್ಘಾಟನ ಸಮಾರಂಭವು ಮಾರ್ಚ್ 15 ರಂದು ದೇರಳಕಟ್ಟೆ, ಇಎಮ್‌ಡಿ ಸಭಾಂಗಣದಲ್ಲಿ ನಡೆಯಿತು.
‘ಇಖ್ರಾ’ ಸಂಪ್ರದಾಯ ಅನುಸರಿಸಿ, ಗಣ್ಯರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್‌ಆರ್ಟ್ಸ್, ಸೈನ್ಸ್, ಕಾಮರ್ಸ್ಅ್ಯಂಡ್ ಮ್ಯಾನೇಜ್ಮೆಂಟ್, ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯ ಪ್ರಾಂಶುಪಾಲರು ಮತ್ತು ವಿಜ್ಞಾನ ವಿಭಾಗ ಡೀನ್ ಡಾ. ಅರುಣ್ ಭಾಗವತ್ ಗಣ್ಯರನ್ನು ಸ್ವಾಗತಿಸಿದರು.
ಕ್ರಿಯೇಟಿವ್‌ಎಜುಕೇಶನ್‌ನ ಪ್ರಾಜೆಕ್ಟ್ ಹೆಡ್ ವರುಣ್ ಬಾಲಸುಬ್ರಹ್ಮಣ್ಯಂ ಕೋರ್ಸ್‌ಗಳ ಪರಿಚಯ ಮಾಡಿದರು. ಅನಂತರ ತರಬೇತಿಯ ಮಾಹಿತಿ ಪತ್ರಬಿಡುಗಡೆ ಮಾಡಲಾಯಿತು.
ಮುಂಬಯಿ ಎಫ್‌ಐಸಿಸಿಐ ಅಧ್ಯಕ್ಷ ಆಶಿಶ್ ಕುಲಕರ್ಣಿ ಮುಖ್ಯ ಅತಿಥಿಯಾಗಿ ಅನಿಸಿಕೆ ವ್ಯಕ್ತಪಡಿಸಿದರು. ಭಾರತದಲ್ಲಿ ಸ್ವಾತಂತ್ರ್ಯ ನಂತರ ಸೃಜನಶೀಲ ಕಲೆಗಳ ಚಿಂತನೆ ಆಗಿರಲಿಲ್ಲ. ಈಗ ಹೆಚ್ಚಿನ ಬೆಳವಣಿಗೆ ಆಗುತ್ತಿದೆ ಎಂದರು.
ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಉಪಕುಲಪತಿ ಡಾ. ಎಂ ವಿಜಯಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಡಾ. ಗಂಗಾಧರ ಸೋಮಯಾಜಿ ಕೆ. ಎಸ್, ರಿಜಿಸ್ಟ್ರಾರ್, ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ ), ಮತ್ತು ಡಾ.ಟಾಮ್ ಎಮ್ ಜೋಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಯತಂತ್ರ ಮತ್ತು ಅಭಿವೃದ್ಧಿ ಐಎಸ್‌ಡಿಸಿ ಯುಕೆ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ.ಬಿ.ನಂದೀಶ್ ಪರೀಕ್ಷಾ ನಿಯಂತ್ರಕ-ವೈ.ಯು ಅಬ್ದುಲ್ ಮೊಹ್ಸಿನ್ ಬಿ, ಹಣಕಾಸು ಅಧಿಕಾರಿ-ವೈ.ಯು, ಡಾ. ಶರೀನಾ ಪಿ, ವೈಸ್ ಪ್ರಿನ್ಸಿಪಾಲ್, ಮತ್ತು ಡೀನ್ ಫ್ಯಾಕಲ್ಟಿ ಆಫ್ ಕಾಮರ್ಸ್ ಮ್ಯಾನೇಜ್ಮೆಂಟ್ ವೈಐಎಎಸ್ಸಿಎಂ, ಡಾ. ಜೀವನ್ ಉಪ ಪ್ರಾಂಶುಪಾಲರು – ವೈಐಎಎಸ್ಸಿಎಂ, ಡಾ. ನಾರಾಯಣ್ ಸುಕುಮಾರ್, ವೈಐಎಎಸ್ಸಿಎಂ ಉಪಪ್ರಾಂಶುಪಾಲರು, ಡಾ. ಸವಿತಾ ಪ್ರಾಧ್ಯಾಪಕರು-ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ವಿಭಾಗ ವಂದಿಸಿದರು. ಮಿಸ್ ಕರೊಲ್ ನೊರೊನ್ಹ ನಿರೂಪಿಸಿದರು